ರೆಡ್ಡಿ ಜಾಮೀನಿಗೆ ತೊಡುಕಾದ ಶ್ರಿಸಾಯಿ ಹೆಲ್ತ್‌ ವಿಲೇಜ್‌ ಜಮೀನು

land-encroachments-marred-reddy-bail-plea
ಹೈದರಾಬಾದ್, ನ.25 : ಜನಾರ್ದನ ರೆಡ್ಡಿ ಮೂರನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳ್ಳಲು ಶ್ರೀಸಾಯಿ ವೆನ್‌ ಹೆಲ್ತ್‌ ವಿಲೇಜ್‌ನ ಅವ್ಯವಹಾರವೂ ಕಾರಣವಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಮೊದಲ ಬಾರಿ ಜಾಮೀನು ತಿರಸ್ಕರಿಸಲು ಸುಗ್ಗಲಮ್ಮ ದೇವಿಯ ಅವಕೃಪೆ ಕಾರಣವಾಗಿತ್ತು.

ಕೃಷ್ಣಪಟ್ನಂ ಸೇರಿದಂತೆ ಆಂಧ್ರದ ಬಂದರುಗಳಿಂದ ಅಕ್ರಮವಾಗಿ ಸಾಗಣೆಯಾಗಿರುವ ಸಾವಿರಾರು ಕೋಟಿ ಮೌಲ್ಯದ ಅದಿರು ಎರಡನೇ ಬಾರಿ ಸಲ್ಲಿಸಿದ್ದ ಜಾಮೀನು ತಿರಸ್ಕರಿಸಲು ಕಾರಣವಾದರೆ, ಮೂರನೇ ಬಾರಿಯ ಜಾಮೀನು ಅರ್ಜಿ ವಜಾಗೊಳ್ಳಲು ಶ್ರಿಸಾಯಿ ವೆನ್‌ ಹೆಲ್ತ್‌ ವಿಲೇಜ್‌ ಕಾರಣ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ.

ಗಣಿಗಾರಿಕೆಯಿಂದ ರೆಡ್ಡಿ ಬಳಗ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಬ್ರಹ್ಮಿಣಿ ಅವಿನ್ಯೂ ನಿರ್ಮಾಣಕ್ಕೂ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿವರ ಸಂಗ್ರಹಿಸಬೇಕಾಗಿದೆ. ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸಿಬಿಐ ಆಕ್ಷೇಪಣಾ ಪತ್ರ ಸಲ್ಲಿಸಿತ್ತು.

ಇದಕ್ಕೆ ಪೂರಕವಾಗಿ ಆಂಧ್ರ ಸರ್ಕಾರ ಶ್ರೀಸಾಯಿ ವೆನ್‌ ಹೆಲ್ತ್‌ ವಿಲೇಜ್‌ ಪಕ್ಕದಲ್ಲಿ ಒತ್ತುವರಿಯಾಗಿರುವ ಕೆರೆಯನ್ನು ತೆರವುಗೊಳಿಸುವ ಸಂಬಂಧ ನೋಟಿಸ್‌ ಜಾರಿ ಮಾಡಿದೆ. ಜನಾರ್ದನ ರೆಡ್ಡಿ ಕರ್ನಾಟಕದಲ್ಲಿ ಮಾಡಿರುವ ಗಣಿ ಅಕ್ರಮಕ್ಕಿಂತಲೂ ಆಂಧ್ರಪ್ರದೇಶದಲ್ಲಿ ಮಾಡಿರುವ ಭೂ ಅಕ್ರಮ ಅವರ ಜೈಲು ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+