ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ ಗಳಿಕೆ: ಸೋನಿಯಾ ಗಾಂಧಿ ಮೇಲೆ ಟಿಡಿಪಿ ಕಣ್ಣು

By Mahesh
|
Google Oneindia Kannada News

Sonia Gandhi
ನವದೆಹಲಿ, ನ.23: ತೆಲುಗುದೇಶಂ ಪಾರ್ಟಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಆಸ್ತಿ ಮೇಲೆ ಸಿಬಿಐ ಕಣ್ಣು ಹಾಕುವಂತೆ ಮಾಡಿದ ವೈಎಸ್ ಜಗನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಟಿಡಿಪಿ ಸಕತ್ ಉಪಾಯ ಮಾಡಿದೆ.

ಟಿಡಿಪಿ ವಿರುದ್ಧ ವೈಎಸ್ ಜಗನ್ ಎತ್ತಿಕಟ್ಟಿ ಆಟ ಆಡಿಸುತ್ತಿದ್ದ ಕಾಂಗ್ರೆಸ್ ಗೆ ಈಗ ಮುಜುಗರ ಅನುಭವಿಸುವಂತ ಮಾಡಲು ಟಿಡಿಪಿ ಸಜ್ಜಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಅಕ್ರಮವಾಗಿ ಸಂಪಾದಿಸಿರುವ ಸ್ಥಿರಾಸ್ತಿ ಬಗ್ಗೆ ತನಿಖೆಗೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಟಿಡಿಪಿ ಸಿದ್ಧತೆ ನಡೆಸಿದೆ.

ಸೋನಿಯಾ ಗಾಂಧಿ ಅಳಿಯ ರಾರ್ಬಡ್ ವದ್ರಾ ಅವರು ಹತ್ತು ಹಲವು ಸರ್ಕಾರೇತರ ಸಂಸ್ಥೆಗಳಿಂದ ಭರ್ಜರಿಯಾಗಿ ಹಣ ಪಡೆದಿದ್ದಾರೆ. ಇದಕ್ಕೆ ಅತ್ತೆ ಸೋನಿಯಾಜಿ ಅವರ ಅಭಯ ಹಸ್ತವೇ ಕಾರಣ ಎಂದು ದೂರಲಾಗಿದೆ.

ಸದ್ಯ ದೆಹಲಿಯಲ್ಲಿರುವ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸಿದ್ದಾರೆ.

ಸೋನಿಯಾ ಗಾಂಧಿ ಜೊತೆಗೆ ಮೋತಿಲಾಲ್ ವೋರಾ ಹಾಗೂ ಅಹ್ಮದ್ ಪಟೇಲ್ ಅವರನ್ನು ಕೋರ್ಟಿಗೆಳೆಯಲು ಟಿಡಿಪಿ ಚಿಂತಿಸಿದೆ.

ಆಂಧ್ರದ ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷದಿಂದ ಚಂದ್ರಬಾಬು ನಾಯ್ಡು ಅವರ ಮೇಲೆ ಸಿಬಿಐ ಕೇಸ್ ಹಾಕಿದ್ದಾರೆ. ವೈಎಸ್ ಜಗನ್ ಕೂಡಾ ಇದಕ್ಕೆ ಪೂರಕವಾಗಿ ನಡೆದುಕೊಂಡಿದ್ದಾರೆ.

ಟಿಡಿಪಿ ಮುಖಂಡರಾದ ಕೆ ಯೆರ್ರಾನಾಯ್ಡು, ವೈ ರಾಮ ಕೃಷ್ಣುಡು ಅವರು ಜನತಾ ಪಾರ್ಟಿ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸ್ವಾಮಿ ಅವರು 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾಜಿ ಅಳಿಯ ರಾರ್ಬಟ್ ವಿರುದ್ಧ ಈಗಾಗಲೇ ಕೋರ್ಟ್ ಗೆ ದೂರು ನೀಡಿದ್ದಾರೆ.

English summary
Telugu Desham Party is reportedly decided to file a petition against AICC president Sonia Gandhi in the Supreme Court on her assets received from various trusts. Robert Vadra is the main accused and highest beneficiary from Sonia's illegal assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X