ಬಳ್ಳಾರಿ ಉಪ ಚುನಾವಣೆ: ವೇತನ ಸಹಿತ ರಜೆ ಘೋಷಣೆ
ಬಳ್ಳಾರಿ,
ನ.23: ಬಳ್ಳಾರಿ ಗ್ರಾಮಾಂತರ ವಿಧಾನಸಭಾ (ಮೀಸಲು) ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಜಿಲ್ಲಾ ಚುನಾವಣಾಧಿಕಾರಿ ಎ ಎ ಬಿಸ್ವಾಸ್ ಇದೇ ನವೆಂಬರ್ 30 ರಂದು ಸಾರ್ವತ್ರಿಕ ರಜೆ ಘೋಷಿಸಿದ್ದಾರೆ. id="toptextpromo">ಮತದಾನದ
ಸ್ಥಳಗಳಾದ ಸರಕಾರಿ ಕಚೇರಿಗಳಿಗೆ ನವೆಂಬರ್ 29ರಂದೂ ರಜೆ ಪ್ರಕಟಿಸಲಾಗಿದೆ. ಡಿಸೆಂಬರ್ 4ರಂದು ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಮತ ಎಣಿಕೆ ನಡೆಯಲಿದ್ದು, ಅಂದು ಪಾಲಿಟೆಕ್ನಿಕ್ ಗೆ ರಜೆ ನೀಡಲಾಗಿದೆ ಎಂದು ಬಿಸ್ವಾಸ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಂದು
(ಬುಧವಾರ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ್ಲ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಸುತ್ತಿರುವ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ-1963 ಕಲಂ 3 (ಎ)ರ ಪ್ರಕಾರ ವೇತನ ಸಹಿತ ರಜೆ ನೀಡಲು ಸಂಬಂಧಪಟ್ಟ ಮಾಲೀಕರು ಹಾಗೂ ನಿಯೋಜಕರಿಗೆ ಕಾರ್ಮಿಕ ಆಯುಕ್ತರು ಸೂಚನೆ ನೀಡಿದ್ದಾರೆ.











Click it and Unblock the Notifications