ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ವಿವಿ ವಿದ್ಯಾರ್ಥಿನಿಯ ರೇಪ್ ಮಾಡಿ ಚಿತ್ರೀಕರಿಸಿದ ಟೆಕ್ಕಿ

By Srinath
|
Google Oneindia Kannada News

delhi-university-girl-raped-by-bpo-techie
ನವದೆಹಲಿ, ನ 23: ಬಿಪಿಒ ಉದ್ಯೋಗಿಯೊಬ್ಬ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗೆ ಮತ್ತುಬರಿಸುವ ಔಷಧಿ ನೀಡಿ ಆಕೆಯ ಮೇಲೆ ಅತ್ಯಾಚಾರ ಮಾಡಿ, ಇಡೀ ಘಟನೆಯನ್ನು ವಿಡಿಯೋ ಚಿತ್ರೀಕರಣ ಸಹ ಮಾಡಿದ್ದಾನೆ.

21 ವರ್ಷದ ಈ ವಿದ್ಯಾರ್ಥಿನಿಯನ್ನು ಬೆದರಿಸಿ, ಬೆದರಿಸಿ ಅತ್ಯಾಚಾರ ಮಾಡುವ ಉದ್ದೇಶದಿಂದ ಅತ್ಯಾಚಾರವನ್ನು ಚಿತ್ರೀಕರಿಸಿದ್ದಾಗಿ ಆರೋಪಿ ಟೆಕ್ಕಿ ಪೊಲೀಸರಿಗೆ ಹೇಳಿದ್ದಾನೆ. ತನ್ನ ದುಃಸ್ಥಿತಿಯ ಬಗ್ಗೆ ಮರುಕಪಟ್ಟ ಬಾಧಿತ ವಿದ್ಯಾರ್ಥಿನಿ ಕಳೆದ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಯನ್ನು 25 ವರ್ಷದ ಹರೀಶ್ ಅಲಿಯಾಸ್ ಚಿರಾಗ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 16ರಂದು ಸದರಿ ವಿದ್ಯಾರ್ಥಿನಿಯನ್ನು ಮೊಬೈಲ್ ಶಾಪ್ ನಲ್ಲಿ ಭೇಟಿಯಾಗಿದ್ದ. ಬಳಿಕ, ಆಕೆಯನ್ನು ರೋಹಿಣಿಯಲ್ಲಿರುವ ಮಾಲ್ ಗೆ ಕರೆದು ಅಲ್ಲಿ ತಂಪುಪಾನೀಯ ಕೊಟ್ಟಿದ್ದಾನೆ. ಆದರೆ ಅದರಲ್ಲಿ ಮತ್ತುಬರಿಸುವ ಔಷಧಿ ಬೆರೆಸಿದ್ದ ಎಂದು ವಿಚಾರಣೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಆರೋಪಿ ತನ್ನ ಬಾಡಿಗೆ ರೂಮಿಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದನ್ನೆಲ್ಲ ವಿಡಿಯೋ ಚಿತ್ರೀಕರಣ ಸಹ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

English summary
A 21-year old Delhi University student was allegedly drugged, raped and filmed naked by a BPO employee, Harish alias Chirag (25) who used the video clip to rape her again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X