ಬಳ್ಳಾರಿಗೆ ಎಂಟ್ರಿ ಕೊಟ್ಟ ಯಡಿಯೂರಪ್ಪ: ಬಿಜೆಪಿಗೆ ಭೀಮಬಲ

ರಾತ್ರಿ ರೈಲು ಸಂಚಾರ ಮಾಡಿ ಮಂಗಳವಾರ ಬೆಳಗ್ಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ಯಡಿಯೂರಪ್ಪ ಇನ್ನು ನಿಮ್ಮದೇ ಗೆಲುವು ಎಂದು ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪಗೆ ಅಭಯ ನೀಡಿದರು.
ಈ ಉಪಚುನಾವಣೆ ನಮಗೆ ಅಗ್ನಿಪರೀಕ್ಷೆ. ಸಂಘಟಿತ ಹೋರಾಟದಿಂದ ಈ ಉಪಚುನಾವಣೆಯಲ್ಲೂ ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಗೆ ಜಯ ಖಚಿತ ಎಂದು ಮಾಗಿಯ ಚಳಿಯಲ್ಲಿ ಮೈಚಳಿಬಿಟ್ಟು ಯಡಿಯೂರಪ್ಪ ಅತ್ಯಂತ ಆತ್ಮವಿಶ್ವಾಸದಿಂದ ನುಡಿದರು.
ಈ ಮಧ್ಯೆ. ಖ್ಯಾತ ನಟಿ ತಾರಾ ಅವರು ಬಿಜೆಪಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಪಕ್ಷಕ್ಕೆ ತಾರಾ ವರ್ಚಸ್ಸು ತಂದಿದ್ದಾರಾದರೂ ಬಿಜೆಪಿ ಪಾಲಿಗೆ ಬಿ.ಎಸ್. ಯಡಿಯೂರಪ್ಪ ಅವರೇ 'ಸ್ಟಾರ್ ಕ್ಯಾಂಪೈನೇರ್' ಆಗಿ ಹೊರಹೊಮ್ಮಿದ್ದಾರೆ.











Click it and Unblock the Notifications