ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಪಾಲಕ್ಕಾಡ್ ಇಂಟರ್‌ಸಿಟಿ ರೈಲು ಆರಂಭ

By Prasad
|
Google Oneindia Kannada News

File photo of a train
ಮಂಗಳೂರು, ನ. 18 : ಮಂಗಳೂರು ಮತ್ತು ಪಾಲಕ್ಕಾಡ್ (ಕೇರಳ) ನಡುವೆ 'ಮಂಗಳೂರು ಸೆಂಟ್ರಲ್ - ಪಾಲಕ್ಕಾಡ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್' ಹೊಸ ರೈಲು ನ.18ರಂದು ಆರಂಭವಾಗಿದೆ. ಮಂಗಳೂರಿನ ಸ್ಟೇಷನ್ನಿನಲ್ಲಿ ಬೆಳಿಗ್ಗೆ 11ಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಹಸಿರು ಧ್ವಜವನ್ನು ತೋರಿದ್ದಾರೆ.

22609 ನಂಬರ್ ರೈಲು ಮಂಗಳೂರು ನಿಲ್ದಾಣವನ್ನು 12 ಗಂಟೆಗೆ ಬಿಟ್ಟು ಪಾಲಕ್ಕಾಡ್ ನಿಲ್ದಾಣವನ್ನು ಸಂಜೆ 6.30ಕ್ಕೆ ರೈಲು ತಲುಪಲಿದೆ. ವಾಪಸ್ ಬರುವಾಗ 22610 ನಂಬರ್ ರೈಲು ಪಾಲಕ್ಕಾಡ್ ಜಂಕ್ಷನ್ ಅನ್ನು ಬೆಳಿಗ್ಗೆ 7.25ಕ್ಕೆ ಬಿಟ್ಟು ಮಂಗಳೂರು ಸೆಂಟ್ರಲ್ ಅನ್ನು ಮಧ್ಯಾಹ್ನ 1.40ಕ್ಕೆ ತಲುಪಲಿದೆ.

ಮಧ್ಯ ಬರುವ ನಿಲ್ದಾಣಗಳು ಕಾಸರಗೋಡ್, ಕನ್ಹನ್‌ಗಡ್, ಪಯ್ಯಾನೂರ್, ಕಣ್ಣೂರು, ತಲಸೆರಿ, ಕೋಳಿಕ್ಕೋಡ್, ತಿರೂರ್, ಶೋರಾನೂರ್ ಮತ್ತು ಒಟ್ಟಪಳಂ. ರೈಲಿನಲ್ಲಿ 1 ಎಸಿ ಚೇರ್ ಕಾರ್, 4 ಎರಡನೇ ದರ್ಜೆಯ ಚೇರ್ ಕಾರ್, 6 ಎರಡನೇ ದರ್ಜೆಯ ಬೋಗಿ ಮತ್ತು 2 ಲಗೇಜ್ ಬೋಗಿಗಳಿವೆ.

ಎರಡೂ ನಿಲ್ದಾಣಗಳ ನಡುವಿನ ಅಂತರ 357 ಕಿ.ಮೀ. ಕೋಲಾರದ ಸಂಸದ ಮತ್ತು ಕೇಂದ್ರ ರೈಲು ಖಾತೆ ಸಹಾಯಕ ಸಚಿವ ಕೆಎಚ್ ಮುನಿಯಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

English summary
Mangalore-Palakkad intercity express new train was flagged off by former Union minister Oscar Fernandes on Nov 18 from Mangalore Central station. Union railway minister of state KH Muniyappa was the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X