ಕಟ್ಟಾ ಮನೆ ದೋಷ ನಿವಾರಣೆಗೆ ಎಷ್ಟು ಖರ್ಚಾಗುತ್ತೆ?

2008ರ ತನಕ ಎಲ್ಲಾ ಚೆನ್ನಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ, ಸಚಿವ ಸ್ಥಾನ ಎಲ್ಲವೂ ಭದ್ರವಾಗಿತ್ತು. ಆದರೆ, ಈ ಮನೆಗೆ ಕಾಲಿಟ್ಟ ಮೇಲೆ, ಕಟ್ಟಾ ಅವರ ಬೆಡ್ ರೂಮ್ ಬಾಗಿಲು ಅಳ್ಳಾಡಲು ಶುರುವಾದ ಮೇಲೆ ಅವರ ಭವಿಷ್ಯ ಕೂಡಾ ಶೇಕ್ ಆಗಲು ಶುರುವಾಯಿತು.
ಕೆಐಎಡಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾನ್ಸರ್ ರೋಗಿ ಕಟ್ಟಾಗೆ ಜಾಮೀನು ಸಿಕ್ಕಿದ್ದು, ಕಟ್ಟಾ ಜಗದೀಶ್ ನಾಯ್ಡು ಇನ್ನೂ ಜೈಲಿನಲ್ಲೇ ಇದ್ದಾರೆ.
ಬೆಡ್ ರೂಮ್ ಪ್ರಾಬ್ಲಂ: ಮನೆಯ ಮೊದಲ ಮಹಡಿಯಲ್ಲಿರುವ ಸೀನಿಯರ್ ಕಟ್ಟಾ ಅವರ ಬೆಡ್ ರೂಮ್ ನ ಡೋರ್ ವಾಯುವ್ಯ ದಿಕ್ಕಿನೆಡೆಗೆ ಮುಖ ಮಾಡಿದೆ. ಇದು ಕಟ್ಟಾ ಕುಟುಂಬಕ್ಕೆ ಹಾನಿ ತರುತ್ತಿದೆ.
ಮುಂಬಾಗಿಲು ಉತ್ತರ ದಿಕ್ಕಿಗೆ ಮುಖ ಮಾಡಿದೆ. ಇದು ಕೂಡಾ ಹಾನಿಕಾರಕ. ಈಗ ಬೆಡ್ ರೂಮ್ ಡೋರ್ ಮುಚ್ಚಲಾಗುವುದು. ನಾಯ್ಡು ಕುಟುಂಬದ ಪ್ರಕಾರ ವಾಸ್ತು ದೋಷ ನಿವಾರಣೆ, ಮನೆ ವಾಸ್ತು ಬದಲಾವಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆಯಂತೆ.
ಆದರೆ, ಲಭ್ಯ ಮಾಹಿತಿ ಪ್ರಕಾರ ಮೂರು ಅಂತಸ್ತಿನ ಮನೆ ವಾಸ್ತು ಬದಲಾವಣೆಗೆ ಕೋಟ್ಯಾಂತರ ರೂ ಸುರಿಯಲಾಗುತ್ತದೆ ಎನ್ನಲಾಗಿದೆ. ಐದಾರು ಕೋಟಿ ಸುರಿದರೆ ಕಟ್ಟಾ ಭವಿಷ್ಯ ಬದಲಾಗುತ್ತೋ, ವಾಸ್ತು ತಜ್ಞರ ಲಕ್ ಬದಲಾಗುತ್ತೋ ಕಾದು ನೋಡೋಣ.












Click it and Unblock the Notifications