ಕಟ್ಟಾ ಬೆಡ್ ರೂಂ ರಹಸ್ಯ ಬಿಚ್ಚಿಟ್ಟ ಬಿಜೆಪಿ ವಾಸ್ತು ತಜ್ಞ

ಕಾನೂನು ತಜ್ಞರ ಕೈಲಿ ಆಗದ ಕೆಲಸವನ್ನು ವಾಸ್ತು ತಜ್ಞರ ಕೈಲಿ ಮಾಡಿಸಲು ಕಟ್ಟಾ ಸುಬ್ರಮಣ್ಯ ನಾಯ್ಡು ಮುಂದಾಗಿದ್ದಾರೆ. ಕಟ್ಟಾ ಕುಟುಂಬದ ಕನಸಿನ ಮನೆಯನ್ನು ಒಮ್ಮೆ ಅಳೆದು ತೂಗಿರುವ ಬಿಜೆಪಿಯ ಅಧಿಕೃತ ವಾಸ್ತು ತಜ್ಞ ಗಂಗಾಧರ್ ಹೊರಹಾಕಿರುವ ಸತ್ಯ ಇಲ್ಲಿದೆ.
ಸದಾಶಿವ ನಗರದ ಬಂಗಲೆಯಲ್ಲಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಬೆಡ್ ರೂಮ್ ವಾಸ್ತು ದೋಷವೇ ಇಷ್ಟೆಲ್ಲ ಅನರ್ಥಕ್ಕೆ ಕಾರಣ. ಕಟ್ಟಾ ಅವರ ಬೆಡ್ ರೂಮ್ ನ ಬಾಗಿಲೇ ಅವರಿಗೆ ಕಟಂಕವಾಗಿ ಕಾಡುತ್ತಿದೆ.
ನನ್ನ ಕ್ಲೈಂಟ್ ಗೆ ಇರುವ ದೋಷಗಳ ಬಗ್ಗೆ ನಾನು ಮಾತನಾಡುವಂತಿಲ್ಲ. ಆದರೆ, ಕಟ್ಟಾ ಅವರ ಮನೆಯಲ್ಲಿ ವಾಸ್ತು ದೋಷವಿದ್ದು, ಋಣಾತ್ಮಕ ಕಿರಣಗಳಿಂದ ತುಂಬಿದೆ. ಇದರಿಂದ ಅಪ್ಪ ಮಗನ ನಡುವೆ ಸದಾ ಕಿತ್ತಾಟ, ಆರೋಗ್ಯದಲ್ಲಿ ಏರು ಪೇರು, ಹಳೆ ಕಷ್ಟಗಳು ಮತ್ತೆ ಕಾಣಿಸಿಕೊಳ್ಳುವುದು ಎಲ್ಲಾ ಆಗುತ್ತಿದೆ. ಇದರ ಪರಿಹಾರಕ್ಕಾಗಿ ಮನೆಯ ವಾಸ್ತು ಬದಲಾಯಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಗಂಗಾಧರ್ ಹೇಳಿದರು.
ಕಟ್ಟಾ ಮನೆಯಲ್ಲಿ ವಾಸ್ತು ದೋಷ ಎಲ್ಲಿದೆ? ಎಷ್ಟು ಖರ್ಚಾಗುತ್ತೆ?












Click it and Unblock the Notifications