ಕಾಳಗದ ಕೋಳಿಗಳಂತೆ ಕಿತ್ತಾಡಿದ ಕಾರಜೋಳ ನಿರಾಣಿ
ಬೆಂಗಳೂರು,
ನ. 17 : ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಸಚಿವರ ಸಂಪುಟ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಕಾಳಗದ ಕೋಳಿಗಳಂತೆ ಕಿತ್ತಾಡಿಕೊಂಡಿದ್ದಾರೆ. id="toptextpromo">ಕಬ್ಬಿಗೆ
ಬೆಂಬಲ ಬೆಲೆ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಾರೀ ವಾಗ್ಯುದ್ಧ ನಡೆದಿದೆ. ಜೊತೆಗೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹಿಂಬಾಲಕರು ಕೂಡ ಗೈರಾಗಿದ್ದು ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು. id='are-slot-1' class='oiad oi-axt oiadv'> id='top-searched-articles'>ಇದು
ವಿಪರೀತಕ್ಕೆ ಹೋಗುವುದನ್ನು ತಪ್ಪಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇಬ್ಬರನ್ನೂ ಸಮಾಧಾನಪಡಿಸಿದರು. ಬಳ್ಳಾರಿ ಉಪ ಚುನಾವಣೆ ಕೂಡ ಬಿಜೆಪಿಗೆ ಸಾಕಷ್ಟು ತಲೆಬಿಸಿ ತಂದಿದೆ. ಸಿಡಿದೆದ್ದ ಬಳ್ಳಾರಿ ಸಹೋದರ ಶ್ರೀರಾಮುಲುವನ್ನು ಹೇಗೆ ಮಟ್ಟಹಾಕಬೇಕು ಎಂಬುದನ್ನು ಚರ್ಚಿಸಲು ಇಂದು ಸಂಜೆ ಬಿಜೆಪಿಯ ಕಾರ್ಯಕಾರಿಣಿ ಸಭೆ ಸೇರುತ್ತಿದೆ.











Click it and Unblock the Notifications