ನರೇಂದ್ರ ಮೋದಿಗೆ ವೀಸಾ ಕೊಡೊಲ್ಲ: ಅಮೆರಿಕ ಪುನರುಚ್ಚಾರ
ಅಹಮದಾಬಾದ್,
ಅ.15: ಮುಖ್ಯಮಂತ್ರಿ ನರೇಂದ್ರ ಮೋದಿ ಆಡಳಿತದಿಂದಾಗಿ ಗುಜರಾತ್ ರಾಜ್ಯ ಆರ್ಥಿಕ ಪಥದಲ್ಲಿ ಮುನ್ನುಗ್ಗುತ್ತಿದೆ ಎಂಬವುದರಲ್ಲಿ ಎರಡು ಮಾತಿಲ್ಲ. ಆದರೆ ಹಾಗಂತ ನರೇಂದ್ರ ಮೋದಿ ಅಮೆರಿಕಕ್ಕೆ ಬರುವುದಕ್ಕೆ ವೀಸಾ ನೀಡಲು ಸುತರಾಂ ಸಾಧ್ಯವಿಲ್ಲ ಎಂದು ವಿದೇಶಾಂಗ ಸಹಾಯಕ ಸಚಿವ ರಾಬರ್ಟ್ ಬ್ಲೇಕ್ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. id="toptextpromo">ನರೇಂದ್ರ
ಮೋದಿಗೆ ವೀಸಾ ದಯಪಾಲಿಸುವ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆ ನಡೆದಿಲ್ಲ. ಆದರೆ ಅಮೆರಿಕದ ಬಂಡವಾಳ ಹೂಡುವುದಕ್ಕೆ ಗುಜರಾತ್ ಪ್ರಶಸ್ತವಾಗಿದೆ ಎಂದು ಬ್ಲೇಕ್ ಹೇಳಿದ್ದಾರೆ. ಬ್ಲೇಕ್, ದಕ್ಷಿಣ ಏಷ್ಯಾ ಭಾಗದಿಂದ ಒಮಾಬಾ ಆಡಳಿತಕ್ಕೆ ನೆರವಾಗುವ ನಿರ್ಣಾಯಕ ವ್ಯಕ್ತಿ ಆಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>2002ರ
ಗುಜರಾತ್ ನರಹತ್ಯೆಯನ್ನು ಖಂಡಿಸಿ, 2005ರ ಮಾರ್ಚ್ ನಲ್ಲಿ ಅಮೆರಿಕ ಸರಕಾರ ಮೋದಿಗೆ ವೀಸಾ ನಿರಾಕರಿಸಿದೆ. ಅಮೆರಿಕ ತನಗೆ ವೀಸಾ ನಿರಾಕರಿಸಿದ್ದನ್ನು 'ಭಾರತದ ಸಂವಿಧಾನಕ್ಕೇ ಅವಮಾನ. ಭಾರತದ ಸಾರ್ವಭೌಮತ್ವದ ಮೇಲಿನ ಪ್ರಹಾರ' ಎಂದು ಮೋದಿ ಸಿಡಿಮಿಡಿಗೊಂಡಿದ್ದರು.











Click it and Unblock the Notifications