ನರ್ಸ್ ಕೊಲೆ ಪ್ರಕರಣಕ್ಕೆ ರಾಜಸ್ಥಾನ ಕ್ಯಾಬಿನೆಟ್ ಬಲಿ

ನರ್ಸ್ ಭಾನ್ವಾರಿ ದೇವಿ ನಾಪತ್ತೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಹಲವು ಸಚಿವರ ಮೇಲೆ ಆರೋಪಗಳು ಕೇಳಿ ಬಂದಿದೆ.
ಕ್ಯಾಬಿನೆಟ್ ಸಚಿವರುಗಳ ರಾಜೀನಾಮೆ ಪತ್ರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೈ ಸೇರಿದೆ. ಸಂಜೆ ವೇಳೆಗೆ ದೆಹಲಿಗೆ ತೆರಳಿ ಹೊಸ ಕ್ಯಾಬಿನೆಟ್ ರಚನೆ ಬಗ್ಗೆ ಸೋನಿಯಾ ಗಾಂಧಿ ಅವರೊಡನೆ ಅಶೋಕ್ ಚರ್ಚಿಸುವ ಸಾಧ್ಯತೆಯಿದೆ.
ಭ್ರಷ್ಟಾಚಾರ, ಕ್ರಿಮಿನಲ್ ಅರೋಪಗಳನ್ನು ಎದುರಿಸುತ್ತಿರುವ ಸಹದ್ಯೋಗಿಗಳ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿರುವ ಅಶೋಕ್, ಹೊಸ ಸಚಿವ ಸಂಪುಟದತ್ತ ಮನಸ್ಸು ಮಾಡಿದ್ದಾರೆ.
ರಾಜಸ್ಥಾನದ ಮಾಜಿ ನೀರಾವರಿ ಸಚಿವ ಮಹಿಪಾಲ್ ಮಡ್ರೆನಾ ಅವರ ಮೇಲೆ ನರ್ಸ್ ಭಾನ್ವರಿ ದೇವಿ ಕಿಡ್ನಾಪ್ ಹಾಗೂ ಕೊಲೆ ಮಾಡಿದ ಆರೋಪವಿದೆ.












Click it and Unblock the Notifications