ಭಾರತದಲ್ಲಿ ವಿಕಿಪೀಡಿಯ ಪ್ರಥಮ ಸಮಾವೇಶಕ್ಕೆ ಸಿದ್ಧತೆ

ನ.18ರಂದು ಆರಂಭವಾಗುವ ಈ ಸಮಾವೇಶಕ್ಕೆ ವಿಕಿಪೀಡಿಯ ಸ್ಥಾಪಕ ಜಿಮ್ಮಿ ವೇಲ್ಸ್ ಆಗಮಿುತ್ತಿರುವುದು ವಿಶೇಷ. ಮುಂಬೈ ವಿಶ್ವವಿದ್ಯಾಲಯದ ಫೋರ್ಟ್ ಆವರಣದ ಕನ್ವೇವೇಷನ್ ಹಾಲ್ ನಲ್ಲಿ ಈ ಪ್ರಥಮ ವಿಕಿ ಕಾನ್ಫರೆನ್ಸ್ ನಡೆಯಲಿದೆ.
ಸಮಾವೇಶದ ಬಗ್ಗೆ ಮಾತನಾಡಿದ ವಿಕಿಮೀಡಿಯಾದ ಅಧ್ಯಕ್ಷ ಅರ್ಜುನ್ ರಾವ್ ಚಾವ್ಲಾ. 'ವಾರ್ಷಿಕವಾಗಿ ಈ ರೀತಿ ವಿಕಿ ಸಮಾವೇಶವನ್ನು ಆಯೋಜಿಸಿ ಭಾರತದಲ್ಲಿರುವ ಎಲ್ಲಾ ವಿಕಿಪೀಡಿಯನ್ಸ್ ಗಳನ್ನು ಒಂದೆಡೆ ಸೇರಿಸುವ ಯೋಜನೆ ಇದೆ.
ಸುಮಾರು 20ಕ್ಕೂ ಅಧಿಕ ಭಾರತೀಯ ಭಾಷೆಗಳಲ್ಲಿರುವ ಮುಕ್ತ ಮಾಹಿತಿ ಹಂಚಿಕೆ ಬಗ್ಗೆ ಚರ್ಚೆ ನಡೆಸಬಹುದು. ಮುಕ್ತ ಹಾಗೂ ಉಚಿತ ಶೈಕ್ಷಣಿಕ ಯೋಜನೆಗಳನ್ನು ರೂಪಿಸಬಹುದು ಎಂದು ರಾವ್ ಹೇಳಿದರು.
ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ಪ್ರಣವ್ ಮಾತನಾಡಿ, ಜಿಮ್ಮಿ ವೇಲ್ಸ್ ಅವರ ಜಗತ್ತಿನ ಪ್ರತಿಯೊಬ್ಬರು ತಮ್ಮದೇ ಭಾಷೆಯಲ್ಲಿ ಮುಕ್ತವಾಗಿ ಮಾಹಿತಿಯನ್ನು ಪಡೆಯುವಂತಾಗಬೇಕು. ಎರಡನೇ ಭಾಷೆ ಅಥವಾ ಬೇರೆ ಸಂಪರ್ಕ ಭಾಷೆಯಿಂದ ಜ್ಞಾನ ಪಡೆಯುವುದು ಅಸಾಧ್ಯ' ಆಶಯದಂತೆ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.












Click it and Unblock the Notifications