ಶ್ರೀರಾಮುಲು ದಿಗ್ವಿಜಯ ಖಂಡಿತ: ಕಾರ್ಡ್ ಭವಿಷ್ಯ

ಏನಿದು ಟರೋಟ್ ಕಾರ್ಡ್: ಇಸ್ಪೀಟ್ ಎಲೆ ಮಾದರಿಯಲ್ಲಿರವ ಟರೋಟ್ ಕಾರ್ಡ್ ಗಳನ್ನು ಹರಡಲಾಗುವುದು. ಮಕ್ಕಳ ಕೈಲಿ ನಾಲ್ಕು ಎಲೆಗಳನ್ನು ಆರಿಸಲಾಗುವುದು.
ಈ ನಾಲ್ಕು ಎಲೆಗಳು strength, weakness, opportunity, threat ಸೂಚಿಸುತ್ತದೆ ಎನ್ನಲಾಗಿದೆ. ಪ್ರಸ್ತುಕ ರಾಜಕೀಯ ಪರಿಸ್ಥಿತಿ, ಶ್ರೀರಾಮುಲು ಅವರ ಗೆಲುವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರ ಮುಂದಿನ ಭವಿಷ್ಯದ ಬಗ್ಗೆ ಟರೋಟ್ ಕಾರ್ಡ್ ಹೇಳುವ ಕಥೆ ಹೀಗಿದೆ.
* ಕರ್ನಾಟಕದ ರಾಜಕೀಯ ಪರಿಸ್ಥಿತಿ ಹುಚ್ಚು ಹಿಡಿದವರ ರೀತಿ ಇದೆ. ಯಾವೊಬ್ಬ ನಾಯಕ ಮನಸ್ಥಿತಿಯೂ ನಿರ್ಧಾರ ತೆಗೆದುಕೊಳ್ಳುವಷ್ಟು ದೃಢವಾಗಿಲ್ಲ.
* ಕಮಲ ಪಾಳೆಯದಲ್ಲಿ ಬಂಡಾಯ, ಭಿನ್ನಮತ ಮುಂದುವರೆಯಲಿದೆ.
* ಏಕಾಂಗಿಯಾಗಿ ಕೂತು ಸನ್ಯಾಸಿಗಳಂತೆ ಯೋಚಿಸುವವರಿಗೆ ಜಯ.
ಚುನಾವಣೆ ಬಗ್ಗೆ ಹೇಳುವುದಾದರೆ ಶ್ರೀರಾಮುಲುಗೆ ಈ ಉಪ ಚುನಾವಣೆ ಹೊಸ ಹುಟ್ಟು ನೀಡಲಿದೆ. ಶ್ರೀರಾಮುಲು ಗೆಲುವು ಸಾಧಿಸುತ್ತಾರೆ. ಆದರೆ, ಗದ್ದುಗೆ ಏರಿದ ಮೇಲೆ ಕುಸಿತ ಆರಂಭವಾಗಲಿದೆ. ಹೊರಗಿನಿಂದ ಒಂದು ಶಕ್ತಿ ಅವರನ್ನು ಮತ್ತೆ ರಸ್ತೆಗೆ ತರಲಿದೆ.
ರಾಜಕೀಯ ನಾಯಕರಲ್ಲಿ ನಿದೆಗೆಡ್ಡು ಓಡಾಟ, ಅಪವಿತ್ರ ಮೈತ್ರಿ(ಜೆಡಿಎಸ್ ಹಾಗೂ ಬಿಜೆಪಿ ಉದಾಹರಿಸಿ)ಸಾಮಾನ್ಯ. ಎಲ್ಲರೂ ಮಧ್ಯಂತರ ಚುನಾವಣೆ ತಪ್ಪಿಸಲು ಹೋರಾಟ ಮಾಡುತ್ತಿದ್ದಾರೆ.
ಯಡಿಯೂರಪ್ಪ ಅವರ ಭವಿಷ್ಯ ಏನು ಹೇಳುತ್ತದೆ..?












Click it and Unblock the Notifications