ಸೋನಿಯಾರಂತೆ ಯಡ್ಡಿ ಆಗಲಿದ್ದಾರೆ ಸೂಪರ್ ಪವರ್

Yeddyurappa to super power
ಬೆಂಗಳೂರು, ನ.10: ಯಡಿಯೂರಪ್ಪ ಅವರ ಭವಿಷ್ಯ ಏನು ಹೇಳುತ್ತದೆ..? ಅವರು ಮತ್ತೆ ಸಿಎಂ ಆಗುತ್ತಾರಾ? ಸದಾನಂದ ಗೌಡರು ಕೆಳಗಿಳಿಯುತ್ತಾರಾ? ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗುತ್ತಾರಾ?

ಅಥವಾ ಕೇಂದ್ರ ತಂಡ ಸೇರುತ್ತಾರಾ? ಎಂಬ ಪ್ರಶ್ನೆಗಳನ್ನು ಹೊತ್ತುಕೊಂಡು ಸಮಯ ಟಿವಿ ನಡೆಸಿದ ಭವಿಷ್ಯ ಕಾರ್ಯಕ್ರಮದಲ್ಲಿ ಅಚ್ಚರಿಯ ಉತ್ತರಗಳು ಸಿಕ್ಕಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕಾರಣಿಗಳಿಗೆ ಸ್ವಾಮೀಜಿ, ಬುದ್ಧಿಜೀವಿಗಳು, ಸಾಹಿತ್ಯಲೋಕ, ಮಾಧ್ಯಮದ ನೆರವು ಬೇಕಿದೆ. ಬೇರೆಯವರ ಮಾರ್ಗದರ್ಶನವಿಲ್ಲದೆ ರಾಜಕೀಯ ನಾಯಕರು ನಿರ್ಧಾರ ಕೈಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.

ಯಡಿಯೂರಪ್ಪ ಅವರಿಗೆ ಜೈಲುವಾಸದಲ್ಲಿದ್ದಾಗ ಭ್ರಮನಿರಸನ ಆಗಿದೆ. ಆಪ್ತರು ಎಂದುಕೊಂಡವರೇ ಬೆನ್ನಿಗೆ ಚೂರಿ ಹಾಕಿರುವುದು ಮನಸ್ಸಿಗೆ ಖೇದ ಎನಿಸಿದೆ.

ಆದರೆ, ಜೈಲಿನಿಂದ ಹೊರಬಂದ ನಂತರ ಅವರಿಗೆ ಈಗ ಶಕ್ತಿ ಲಭಿಸಿದೆ. ಭಾಷಣಗಳಿಗೆ ಸೀಮಿತವಾಗದೆ ಎಲ್ಲವನ್ನೂ ಪ್ರಾಯೋಗಿಕವಾಗಿ ನೋಡುತ್ತಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆ.

ಸೂಪರ್ ಪವರ್ ಬಿಎಸ್ ವೈ: ಕರ್ನಾಟಕ ಪ್ರವಾಸ ಈ ಯೋಜನೆಯ ಮೊದಲ ಹಂತ. ಸೋನಿಯಾ ಗಾಂಧಿ ಅವರಂತೆ ಯಡಿಯೂರಪ್ಪ ಸೂಪರ್ ಪವರ್ ಆಗುತ್ತಾರೆ. ಸದ್ಯಕ್ಕೆ ಅವರಿಗೆ ಸಿಎಂ ಆಗಲಿ ರಾಜ್ಯಾಧ್ಯಕ್ಷ ಪಟ್ಟವಾಗಲಿ ಸಿಗುವುದಿಲ್ಲ.

ಆತುರದ ನಿರ್ಧಾರ ಇಲ್ಲ. ಅವರ ಮೇಲೆ ಕೆಲವು ಪ್ರಯೋಗಗಳು ನಡೆದಿದೆ. ಕೆಟ್ಟ ರಕ್ತ ಹೊರಹಾಕಬೇಕಿದೆ. ಜ್ಯೋತಿಷಿಗಳು, ಹಿತೈಷಿಗಳು, ಸ್ವಾಮೀಜಿಗಳ ಮಾರ್ಗದರ್ಶನ ಪಡೆದು ಇನ್ನಷ್ಟು ತಾಳ್ಮೆ ಮೈಗೂಡಿಸಿಕೊಳ್ಳುತ್ತಾರೆ.

ಅವರ ಹಠ ಸ್ವಭಾವಕ್ಕೆ ತಾಳ್ಮೆಯ ಅಡಿಪಾಯವಾಗಿ ನಿಲ್ಲಲಿದೆ. ಯಡಿಯೂರಪ್ಪ ಅವರ ನಿಜವಾದ ಶಕ್ತಿ ಮುಂದೆ ಎಲ್ಲರನ್ನೂ ಬೆರಗುಗೊಳಿಸಲಿದೆ ಎಂದು ಚಂದಾಪಾಂಡೆ ಸೇರಿದಂತೆ ಹಲವು ಕಾರ್ಡ್ ರೀಡರ್ ಗಳು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+