ಅನೈತಿಕ ಸಂಬಂಧ ಶಂಕೆ, ಪತ್ನಿ ಕೊಂದ ಪತಿ ಶರಣು

ಹೈದರಾಬಾದ್, ನ.8: 'ರೂಪವತಿ ಭಾರ್ಯಾ ಶತ್ರು' ಎನ್ನುತ್ತದೆ ಒಂದು ಗಾದೆ. ನೋಡಲು ಚೆಂದವಾಗಿದ್ದ ಪತ್ನಿಯ ಮೈಯಲ್ಲಿ ಪರಪುರುಷನ ವಾಸನೆ ಕಂಡುಕೊಂಡ ಪತಿಯೊಬ್ಬ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.

ಕರೀಂ ನಗರ ಮೂಲದ ಲಕ್ಷ್ಮಿಗೆ ಇನ್ನೂ 22ರ ಹರೆಯ ಪತಿ ಖಾಸಗಿ ಕಂಪೆನಿಯೊಂದರಲ್ಲಿ ಒಳ್ಳೆ ಉದ್ಯೋಗದಲ್ಲಿದ್ದ. ದಂಪತಿಗೆ 14 ತಿಂಗಳ ಮಗು ಇದೆ. ಅಖಿಲ್ ಎಂದು ಹೆಸರಿಟ್ಟು ಸುಂದರ ಸಂಸಾರ ನೌಕೆಯಲ್ಲಿ ದಾಂಪತ್ಯ ಸಾಗಿತ್ತು.

ಆದರೆ, ಹಫೀಜ್ ಪೇಟೆಗೆ ಈ ಸಂಸಾರ ಶಿಫ್ಟ್ ಆದಮೇಲೆ ಪತಿ ರಮಣನಿಗೆ ಪತ್ನಿ ಲಕ್ಷ್ಮಿ ಮೇಲೆ ಸುಮ್ಮನೆ ಅನುಮಾನ ಕಾಡತೊಡಗಿದೆ. ಮೊದಮೊದಲು ಪತಿಯ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ಲಕ್ಷ್ಮಿ ನಂತರ ಆತನಿಗೆ ಎದುರು ಉತ್ತರ ನೀಡಲು ಆರಂಭಿಸುತ್ತಾಳೆ.

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಇಬ್ಬರು ಹಾಸಿಗೆ ಸೇರಿದಾಗ ಸರಿಯಾಗಿ ಸ್ಪಂದಿಸದ ಹೆಂಡತಿ ಮೇಲೆ ರಮಣನಿಗೆ ಅನುಮಾನ ಮೂಡಿದೆ.ವಾರಾಂತ್ಯ ವಿಹಾರಕ್ಕೆ ಕರೆದಾಗ ನೀವೇ ಹೋಗಿ ಬನ್ನಿ ನಾನು ಮನೆಯಲ್ಲೇ ಇರುತ್ತೇನೆ ಎಂದು ಆಕೆ ಹೇಳಿದ್ದಾಳೆ.

ಸಂಶಯದ ಮೂಟೆ ಹೊತ್ತುಕೊಂಡಿದ್ದ ರಮಣ ಕೊನೆಗೆ ಆಕೆಯ ಕಥೆ ಮುಗಿಸಿದ್ದಾನೆ. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಯಾವುದೇ ಬಲವಾದ ಪುರಾವೆ ಇಲ್ಲದಿದ್ದರೂ ಆತುರ ನಿರ್ಧಾರ ಕೈಗೊಂಡು ಪ್ರೀತಿಸಿ ಕೈ ಹಿಡಿದಿದ್ದ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ನಂತರ ಪಶ್ಚಾತ್ತಾಪ ಪಟ್ಟು ಮಿಯಾಪುರ್ ಪೊಲೀಸ್ ಠಾಣೆ ತೆರಳಿ ಶರಣಾಗಿದ್ದಾನೆ. ಅಪ್ಪ ಅಮ್ಮನ ಜಗಳದಿಂದ ಇಂದು ಮಗು ಅನಾಥವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+