ಹುಬ್ಬಳ್ಳಿಯಲ್ಲಿ ನಾಲ್ವರು ಬಾಡಿಗೆ ಹಂತಕರ ಬಂಧನ

4 supari killers arrested
ಹುಬ್ಬಳ್ಳಿ, ನ. 8 : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ನಾಲ್ವರು ಸುಪಾರಿ ಹಂತಕರನ್ನು ಸೋಮವಾರ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ನೂರ್ ಅಹ್ಮದ್, ಸೈಯದ್ ಯುಸೂಫ್ ಬಳ್ಳಾರಿ, ನಿಸಾರ್ ಅಹ್ಮದ್ ಮತ್ತು ಶಬ್ಬೀರ್. ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಹಳೆ ಹುಬ್ಬಳ್ಳಿಯಲ್ಲಿರುವ ಅಹ್ಮದೀಯ ಇಂಜಿನಿಯರಿಂಗ್ ಫ್ಯಾಕ್ಟರಿಯ ಮಾಲಿಕ ಮುನ್ವರ್ ಅಹ್ಮದ್ ಹತ್ಯೆಗೀಡಾದವರು. ಮುನ್ವರ್ ಅವರು ನಾಪತ್ತೆಯಾಗಿದ್ದ ಕಾರಣ ಅಕ್ಟೋಬರ್ 21ರಂದು ಅವರ ಪತ್ನಿ ನುಸ್ರತ್ ಜಬೀನ್ ಪೊಲೀರಸಿಗೆ ದೂರು ನೀಡಿದ್ದರು.

ಸಾಕಷ್ಟು ಹುಡುಕಾಟದ ನಂತರ ಫ್ಯಾಕ್ಟರಿಯ ನೀರಿನ ಟ್ಯಾಂಕ್‌ನಲ್ಲಿ ಮುನ್ವರ್ ಅವರ ದೇಹ ದೊರೆತಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರ ಬೇಟೆಗೆ ತೊಡಗಿದ್ದರು. ಕೊಲೆಯ ಜಾಡನ್ನು ಹಿಡಿದು ಹೊರಟ ಹಳೆ ಹುಬ್ಬಳ್ಳಿ ಠಾಣೆಯ ಇನ್ ಸ್ಪೆಕ್ಟರ್ ಸಚಿನ್ ಛಲವಾದಿ, ಕೊಲೆಗಡುಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಗೆ ಕಾರಣ : ಮುನ್ವರ್ ಫ್ಯಾಕ್ಟರಿ ಆರಂಭಿಸಿದ ನಂತರ ಸಾಕಷ್ಟು ಏಳ್ಗೆ ಕಂಡಿದ್ದರು. ಅದನ್ನು ಸಹಿಸದ ಅವರ ಸಹೋದರರೇ ಮುನ್ವರ್ ಅವರ ಹತ್ಯೆಗೆ ಸಂಚು ಹೂಡಿದ್ದರು ಮತ್ತು ಬಾಡಿಗೆ ಹಂತಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+