ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ರಾಜಕಾರಣ: ಯಡಿಯೂರಪ್ಪ ಭೇಟಿ ಮಾಡಿದ ಈಶ್ವರಪ್ಪ

By Srinath
|
Google Oneindia Kannada News

ks-eshwarappa-meets-jail-bird-bsy-bellary-bypolls
ಬೆಂಗಳೂರು, ನ. 7: ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ ದಿಢೀರನೆ ದೌಡಾಯಿಸಿದ್ದಾರೆ. ಇದೇನು ಅವರೂ ಜೈಲುಪಾಲಾದರಾ? ಎಂದು ಹುಬ್ಬೇರಿಸಬೇಡಿ. ಆದರೆ ಅಲ್ಲಿರುವ ಜೈಲು ಹಕ್ಕಿ ಬಿ.ಎಸ್‌. ಯಡಿಯೂರಪ್ಪ ಅವರ ಆದೇಶದಂತೆ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಬಳ್ಳಾರಿ ಗ್ರಾಮಾಂತರ ಉಪಚುನಾವಣೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದು, ಶ್ರೀರಾಮುಲು ಅವರ ವಿಷಯವನ್ನು ಯಡಿಯೂರಪ್ಪ ಜತೆ ಚರ್ಚಿಸಲು ಈಶ್ವರಪ್ಪ ಜೈಲಿಗೆ ಭೇಟಿ ನೀಡಿ ಸುಮಾರು 45 ನಿಮಿಷಗಳ ಕಾಲ ಏಕಾಂತದಲ್ಲಿ ಚರ್ಚಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಿಂದಲೇ ಬಿಎಸ್ ವೈ ರಾಜಕಾರಣ:
ಮೊನ್ನೆಯಷ್ಟೇ ಯಡಿಯೂರಪ್ನೋರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದ ಈಶ್ವರಪ್ಪ, ರಾಜ್ಯದಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಿದ ಶ್ರೇಯಸ್ಸು ಯಡಿಯೂರಪ್ನೋರದು. ಅವರ ಕೊಡುಗೆ ಅಪಾರ ಎಂದು ಹಾಡಿಹೊಗಳಿದ್ದರು.

ಇದೀಗ ರಾಜ್ಯದಲ್ಲಿ ಮತ್ತೊಂದು (ಹಾಲಿ ವಿಧಾನಸಭೆಯ ಕೊನೆಯ ಉಪಚುನಾವಣೆ?) ಉಪಚುನಾವಣೆ ಎದುರಾಗಿದ್ದು ಶ್ರೀರಾಮುಲು ಅವರ 'ಬಂಡಾಯ'ದಿಂದಾಗಿ ಪಕ್ಷ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ನವರ ಮಾರ್ಗದರ್ಶನ ಅನಿವಾರ್ಯ ಎಂದು ಭಾವಿಸಿರುವ ರಾಜ್ಯ ಬಿಜೆಪಿ ತನ್ನ ರಾಜ್ಯಾಧ್ಯಕ್ಷರನ್ನು ಜೈಲಿಗಟ್ಟಿ ಯಡಿಯೂರಪ್ಪನವರ ಸಲಹೆ ಸೂಚನೆ ಪಡೆದಿದೆ ಎನ್ನಲಾಗಿದೆ.

English summary
As the former Karnataka chief minister BS Yeddyurappa cooling his heels in the Parappana Agrahara central jail the state BJP unit president K. S. Eshwarappa rushes to the jail to consult BSY over the candidature of Sreeramulu in Bellary by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X