ಪಕ್ಷೇತರರಾದರೆ ಶ್ರೀರಾಮುಲುಗೆ ಜೆಡಿಎಸ್ ಬೆಂಬಲ?

ಶ್ರೀರಾಮುಲು ಅವರಿಗೇ ಟಿಕೆಟ್ ನೀಡುವ ಹವಣಿಕೆಯಲ್ಲಿ ಬಿಜೆಪಿ ಇದ್ದರೆ, ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತವನ್ನು ಆಪ್ತರೆದಿರು ಶ್ರೀರಾಮುಲು ವ್ಯಕ್ತಪಡಿಸಿದ್ದಾರೆ. ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಜೆಡಿಎಸ್ ಅವರನ್ನು ಬೆಂಬಲಿಸಲಿದೆ ಎಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಹೇಳಿರುವುದು ಭಾರೀ ಕುತೂಹಲ ಕೆರಳಿಸಿದೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ದ್ವಂದ್ವ ನಿಲುವಿನ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ.
ಕಾಂಗ್ರೆಸ್‌ನಿಂದ ಯಾರು? : ಕಾಂಗ್ರೆಸ್‌ನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಮಲ ಮರಿಸ್ವಾಮಿ, ಎನ್.ವೈ. ಹನುಮಂತಪ್ಪ ಅವರ ಪುತ್ರ ಎನ್.ವೈ. ಅಜಯ್ ಮತ್ತು ವಿ.ಕೆ. ಬಸಪ್ಪ ಅವರ ಹೆಸರು ಅಂತಿಮ ಪಟ್ಟಿಯಲ್ಲಿದೆ. ಈ ಮೂವರು ಅಭ್ಯರ್ಥಿಗಳಲ್ಲಿ ಕಣಕ್ಕಿಳಿಸುವ ಒಮ್ಮತದ ಸಮರ್ಥ ಅಭ್ಯರ್ಥಿಯ ಆಯ್ಕೆಗಾಗಿ ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ಸಿಗರು ಬೆಂಗಳೂರಿನಲ್ಲಿ ಮಂಗಳವಾರ ಸಭೆ ಸೇರಲಿದ್ದಾರೆ.
ಕಮಲ ಮರಿಸ್ವಾಮಿ ಮತ್ತು ಅಜೇಯ ಅವರ ಮಧ್ಯೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕಮಲ ಮರಿಸ್ವಾಮಿ ಸ್ಥಳೀಯರು ಮತ್ತು ಕ್ಷೇತ್ರದ ಬಹುಸಂಖ್ಯಾತ ವೀರಶೈವ ಜನಾಂಗದ ಎಲ್ಲಾ ಪಂಗಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದಶಕಗಳಿಂದಲೂ ಕಾಂಗ್ರೆಸ್‌ನಲ್ಲೇ ಇರುವ ಕಮಲ ಮರಿಸ್ವಾಮಿ ಅವರನ್ನೇ ಪಕ್ಷ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ದಾಜಿಸಲಾಗಿದೆ. ಮಾಜಿ ಸಂಸದ ಹನುಂತಪ್ಪ ಅವರು ಕೂಡ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ.











Click it and Unblock the Notifications