ಜೈಲುಹಕ್ಕಿ ಯಡಿಯೂರಪ್ನೋರೇ ಮುಂದಿನ ಮುಖ್ಯಮಂತ್ರಿ: ಈಶ್ವರಪ್ಪ

ರಾಜ್ಯದಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಿದವರು ಯಡಿಯೂರಪ್ನೋರು. ಅವರ ಕೊಡುಗೆ ಅಪಾರ. ಅವರು ಜೈಲಿನಿಂದ ಹೊರಬರುತ್ತಿದ್ದಂತೆ ದಿಲ್ಲಿಯಲ್ಲಿ ವರಿಷ್ಠರಿಗೆ ಇದನ್ನೇ ಹೇಳುತ್ತೇವೆ. ಒಟ್ಟಿನಲಿ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಶ್ವರಪ್ಪ ಸಾರಿದ್ದಾರೆ.
ಆದರೆ ಈಶ್ವರಪ್ಪ ಯಾಕೆ ಹೀಗೆ ಹೇಳಿದ್ದಾರೆ ಎಂಬುದು ನಿಗೂಢವಾಗಿದೆ. ಯಡ್ಡಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮತ್ತು ರಾಜ್ಯಾಧ್ಯಕ್ಷರಾಗಿ, ಯಡ್ಡಿ ಪಟಾಲಂನಲ್ಲಿ ಯಾರಂದರೆ ಯಾರ ಬಗ್ಗೆಯೂ ವಿಶ್ವಾಸವಿರಿಸಿಕೊಳ್ಳದ ಈಶ್ವರಪ್ಪ, ಯಡಿಯೂರಪ್ಪ ಬಗ್ಗೆ ಮೃದುವಾಗಿರುವುದು ಏಕೋ ತಿಳಿಯದಾಗಿದೆ.
ಚುನಾವಣೆಗೆ ಮುಂಚೆ ಯಡಿಯೂರಪ್ಪ ಜೈಲಿನಿಂದ ಹೊರಬರುವುದಿಲ್ಲ. ಇದನ್ನೇ ನೆಪವಾಗಿಸಿಕೊಂಡು ಯಡಿಯೂರಪ್ಪ ಜೈಲುಪಾಲಾಗಿರುವುದರಿಂದ ಅವರನ್ನು ಮುಖ್ಯವಾಹಿನಿಗೆ ತರುವುದು ಬೇಡ ಎಂದು ಈಶ್ವರಪ್ಪ ಎಣಿಕೆ ಹಾಕಿದ್ದಾರಾ!? ಈ ಹಂತದಲ್ಲಿ ಎಲ್ಲವನ್ನೂ 'ಕಾಲ ನಿರ್ಣಯಂ'ಗೆ ಬಿಡುವುದು ಒಳಿತು.












Click it and Unblock the Notifications