ದೊಡ್ಡ ಗೌಡರ ಬಾಯಿಂದ ರಾಜಕೀಯ ನಿವೃತ್ತಿಯ ಮಾತು

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, 40 ವರ್ಷದ ರಾಜಕೀಯ ಜೀವನದಲ್ಲಿ ರೈತರು ಮತ್ತು ಶೋಷಿತರ ಪರ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ಸದ್ಯೋಭವಿಷ್ಯತ್ ನಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ತಮ್ಮ ಹೋರಾಟದ ಕೊನೆಯ ಘಟ್ಟವಾಗಿದೆ. 224 ಕ್ಷೇತ್ರಗಳಿಗೂ ಖುದ್ದಾಗಿ ನಾನೇ ಪ್ರವಾಸ ಕೈಗೊಂಡು, ಜೆಡಿಎಸ್‌ನಿಂದ ಸ್ಪರ್ಧಿಸುವ 224 ಅಭ್ಯರ್ಥಿಗಳಿಗೂ ಸ್ವತಃ ನಾನೇ ಬಿ ಫಾರಂ ವಿತರಿಸುವುದಾಗಿ ತಿಳಿಸಿದರು.
ಕೃಷ್ಣ ತುಂಡು ಗುತ್ತಿಗೆ ಪ್ರಕರಣದಲ್ಲಿ ಶಂಕರ ಬಿದರಿ ಅವರ ಮೇಲೆ ತಮಗೇನು ವೈಯಕ್ತಿಕ ದ್ವೇಷವಿಲ್ಲ, ಯಾವುದೇ ಆರೋಪದಲ್ಲಿ ಎಫ್ಐಆರ್ ದಾಖಲಿಸುವಾಗ ಆರೋಪಿಗಳ ಹೆಸರನ್ನು ಕಾಣಿಸಲಾಗುತ್ತದೆ.
ಆದರೆ ಬಿದರಿಯವರು ಈ ಪ್ರಕರಣದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಇತರರು ಎಂದು ಕಾಣಿಸಿರುವುದು ದುರುದ್ಧೇಶಪೂರಕ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅನುಭವಿ ಅಧಿಕಾರಿ ಎಡವಿರುವ ಬಗ್ಗೆ ತಮ್ಮ ದೂರಿದೆಯೇ ಹೊರತು ವೈಯಕ್ತಿವಾಗಿ ಅಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಲೋಕಾಯುಕ್ತರ ಆಯ್ಕೆ ಸಂಬಂಧ ಎದ್ದಿರುವ ಗೊಂದಲಗಳ ಬಗ್ಗೆ ಪ್ರಶ್ನಿಸಿದಾಗ, ಇಂತಹವರೇ ಲೋಕಾಯುಕ್ತರು ಆಗಬೇಕೆಂಬ ತೀರ್ಮಾನ ತೆಗೆದುಕೊಂಡಾಗ ಈ ರೀತಿಯ ಗೊಂದಲಗಳು ಸಹಜ, ಇದಕ್ಕಾಗಿ ಇರುವ ಸಮಿತಿಯು ಸೂಕ್ತ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿದರೆ, ಅದರಲ್ಲಿ ಒಬ್ಬರ ಆಯ್ಕೆಯಾಗುತ್ತದೆ. ಆದರೆ ಬಿಜೆಪಿ ಸರ್ಕಾರ ಒಬ್ಬರ ಹೆಸರನ್ನೇ ಶಿಫಾರಸ್ಸು ಮಾಡಿ ಕಳುಹಿಸಿರುವುದರಿಂದ ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದರು.












Click it and Unblock the Notifications