ನಾನು ಬೇಡಿಕೆ ಇಟ್ಟಿಲ್ಲ, ಕಣಕ್ಕಿಳಿಯುವುದು ಸತ್ಯ: ಶ್ರೀರಾಮುಲು

ಸ್ವತಂತ್ರವಾಗಿ ಸ್ಫರ್ಧಿಸುವಂತೆ ಕೆಲವು ಬೆಂಬಲಿಗರು ಒತ್ತಾಯಿಸಿದ್ದಾರೆ. ಬಿಜೆಪಿಯಿಂದಲೇ ಸ್ಫರ್ಧಿಸುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ.
ಬಿಜೆಪಿ ವೀಕ್ಷಕರ ಜೊತೆ ಗ್ರಾಮೀಣ ಪ್ರದೇಶದ ಜನರೊಂದಿಗೆ ಇನ್ನೂ ಒಂದು ಸುತ್ತು ಚರ್ಚಿಸುತ್ತೇನೆ. ಅದಕ್ಕಿಂತ ಮುಖ್ಯವಾಗಿ ನಮ್ಮ ಅಣ್ಣ ಜನಾರ್ದನ ರೆಡ್ಡಿ ಅವರ ಸಲಹೆಯಂತೆ ನಡೆದುಕೊಳ್ಳುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ನ. 9 ಅಥವಾ 11ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಸ್ಪರ್ಧೆ ಖಚಿತ ಆದರೆ, ಬಿಜೆಪಿ ಚಿನ್ಹೆ ಅಥವಾ ಹೊಸ ಚಿನ್ಹೆಯಡಿಯಲ್ಲಿ ಸ್ಪರ್ಧಿಸುತ್ತಾರೋ ಕಾದು ನೋಡಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications