ವೇಶ್ಯೆ ಆಸೆಗೆ ಬಿದ್ದವರ ಲೂಟಿ ಮಾಡುತ್ತಿದ್ದವನ ಬಂಧನ

Auto driver arrested
ಮೈಸೂರು, ನ. 6 : ಲೈಂಗಿಕ ಸುಖಕ್ಕೆ ಹಾತೊರೆಯುವ ಪುರುಷರಿಗೆ ವೇಶ್ಯೆಯನ್ನು ತೋರಿಸುವ ಆಮಿಷವೊಡ್ಡಿ, ತನ್ನ ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಳಿಕ ಅವರಿಗೆ ಥಳಿಸಿ ಹಣ, ಚಿನ್ನಾಭರಣವನ್ನು ದೋಚುತ್ತಿದ್ದ ಖತರ್‌ನಾಕ್ ಆಟೋ ಡ್ರೈವರ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಗೌಸಿಯಾ ನಗರದ ನಿವಾಸಿ ಜಾವೀದ್ ಎಂಬಾತನೇ ಬಂಧಿತ. ಈತ ಕಳೆದ ಕೆಲವು ವರ್ಷಗಳಿಂದ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ನಗರದಲ್ಲಿ ಆಟೋ ಓಡಿಸುತ್ತಿದ್ದಾಗ ಕೆಲವು ಪುರುಷರು ವೇಶ್ಯೆರನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಈತ ಹಣ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡ.

ಸಾಮಾನ್ಯವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ವೇಶ್ಯೆಯರು ಅಡ್ಡಾಡುತ್ತಾರೆ. ಇವರನ್ನು ಹುಡುಕಿಕೊಂಡು ಬರುವ ಪುರುಷರೂ ಅಡ್ಡಾಡುತ್ತಿರುತ್ತಾರೆ. ದೂರದಿಂದಲೇ ಇದನ್ನು ಗಮನಿಸುತ್ತಿದ್ದ ಜಾವೀದ್ ವೇಶ್ಯೆಯರಿಗಾಗಿ ಅಡ್ಡಾಡುವ ಪುರುಷರ ಬಳಿ ತೆರಳಿ ನಿಮಗೆ ಹುಡುಗಿಯರು ಬೇಕಾ? ಸಿಟಿಯಿಂದ ಹೊರಗೆ ಒಳ್ಳೊಳ್ಳೆ ಹುಡುಗಿಯರು ಇದ್ದಾರೆ. ನಿಮಗೆ ಒಪ್ಪಿಗೆಯಾದರೆ ನಾನು ಅವರಿರುವ ಜಾಗ ತೋರಿಸುತ್ತೇನೆ ಎನ್ನುತ್ತಿದ್ದನು.

ಅವನ ಮಾತು ನಂಬಿ ಆಟೋ ಹತ್ತಿದ ವ್ಯಕ್ತಿಯನ್ನು ವೇಶ್ಯೆಯರ ಮನೆ ತೋರಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಆಟೋದಿಂದ ಇಳಿಯುವಂತೆ ಹೇಳುತ್ತಿದ್ದನಲ್ಲದೆ, ಅವರಿಗೆ ಥಳಿಸಿ ಅವರ ಬಳಿಯಿದ್ದ ಹಣ, ಮೊಬೈಲ್, ಚಿನ್ನಾಭರಣಗಳನ್ನು ಕಸಿದುಕೊಳ್ಳುತ್ತಿದ್ದನು. ಆದರೆ ಹೀಗೆ ಹಣ ಕಳೆದುಕೊಂಡವರು ಮಾನ ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಜಾವೇದ್‌ನ ಬೆನ್ನು ಹತ್ತಿದ್ದರಲ್ಲದೆ, ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿದಾಗ ತಾನು ಮಾಡುತ್ತಿದ್ದ ಕೃತ್ಯವನ್ನು ಬಾಯಿಬಿಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+