ಬೈಸಿಕಲ್ ಬಳಕೆಗೆ ಕೇಂದ್ರ ಸರಕಾರದ ಪ್ರೋತ್ಸಾಹ ಪ್ರಕಟಣೆ

Buy bicycle instead of bike of car
ಬೆಂಗಳೂರು, ನ. 3 : ಈ ದೇಶದ ಜನಸಾಮಾನ್ಯರು ಏನು ಆಗಬಾರದೆಂದು ಬಯಸಿದ್ದರೋ ಅದು ಆಗೇ ಹೋಗಿದೆ. ಲಗಾಮು ಬಿಟ್ಟ ಹೋರಿಯಂತಾಗಿರುವ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ರು.1.82 ಏರಿಸಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರಿಂದ ಪೆಟ್ರೋಲ್ ಬೆಲೆ ಏರಿಸುವುದು ಅನಿವಾರ್ಯವಾಗಿತ್ತು ಎಂದು ಕಂಪನಿಗಳು ಹೇಳಿಕೊಂಡಿವೆ. ಕಚ್ಚಾ ತೈಲದ ಬೆಲೆ ಏರಿದ್ದರಿಂದ ಲೀಟರಿಗೆ 1.50 ರು. ನಷ್ಟವಾಗುತ್ತದೆಂದು ತೈಲ ಕಂಪನಿಗಳು ಹೇಳಿದ್ದವು. ಕೆಲವೇ ದಿನಗಳಲ್ಲಿ ಡೀಸೆಲ್ ಮತ್ತು ಎಲ್ ಪಿಜಿ ಬೆಲೆಗಳು ಕೂಡ ಏರುವ ಸಂಭವವಿದೆ.

ಈ ಬೆಲೆ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ಲೀಟರಿಗೆ 74.82 ರು. ಇದ್ದ ಪೆಟ್ರೋಲ್ ಬೆಲೆ ಈಗ 76.82 ರು. ಆಗಿದೆ. ದೆಹಲಿಯಲ್ಲಿ ಲೀಟರಿಗೆ 68.84 ರು., ಚೆನ್ನೈನಲ್ಲಿ 71.16 ರು., ಮುಂಬೈನಲ್ಲಿ 73.71 ರು., ಕೊಲ್ಕತಾದಲ್ಲಿ 71.93 ರು. ಆಗಿದೆ. ದೇಶದ ಎಲ್ಲ ಪ್ರದೇಶಕ್ಕಿಂತ ದುಬಾರಿ ಬೆಲೆ ಇರುವುದು ಬೆಂಗಳೂರಿನಲ್ಲಿ.

ಕಳೆದ 60 ದಿನಗಳಲ್ಲಿ ಪೆಟ್ರೋಲ್ ಬೆಲೆ ಏರುತ್ತಿರುವುದು ಇದು ಎರಡನೇ ಬಾರಿ ಮತ್ತು ಕಳೆದ ಒಂದು ವರ್ಷದಲ್ಲಿ ಏರುತ್ತಿರುವುದು 5ನೇ ಬಾರಿ. ಆಹಾರ ಹಣದುಬ್ಬರ ದೀಪಾವಳಿಯ ರಾಕೆಟ್ ಗಿಂತ ವೇಗವಾಗಿ ಮೇಲಕ್ಕೆ ಚಿಮ್ಮುತ್ತಿರುವ ಹಂತದಲ್ಲಿ ಪೆಟ್ರೋಲ್ ಬೆಲೆ ಕೂಡ ಏರಿರುವುದು ಶ್ರೀಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

"ಕಾರು ಬೈಕುಗಳನ್ನೆಲ್ಲ ಜನರು ಮನೆಯಲ್ಲಿಟ್ಟು ಕಚೇರಿಗೆ ಮತ್ತು ಇನ್ನಿತರ ಕೆಲಸಗಳಿಗೆ ಸಾರ್ವಜನಿಕ ಬಸ್ ಸೇವೆಯನ್ನು ಬಳಸುವುದು ಅಥವಾ ಸೈಕಲ್ ಏರುವುದು ಅನಿವಾರ್ಯವಾಗಿದೆ. ಕನಿಷ್ಠ ವಾಯುಮಾಲಿನ್ಯವಾದರೂ ತಗ್ಗೀತು" ಅನ್ನುತ್ತಾರೆ ಕೆಂಗೇರಿ ಉಪನಗರದಿಂದ ಜಯನಗರ 3ನೇ ಬ್ಲಾಕಿಗೆ ಬೈಕಿನಲ್ಲಿ ಪ್ರತಿದಿನ ಸಾಗುವ ರಾಮಸ್ವಾಮಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+