ಶುಕ್ರವಾರವೂ ಯಡಿಯೂರಪ್ಪಗೆ ಸಿಗಲಿಲ್ಲ ಶುಭ ಸುದ್ದಿ

ಕೇಸಿನ ಪ್ರಮುಖ ಆರೋಪಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರದಂದು ಶುಭ ಸುದ್ದಿಯನ್ನು ನಿರೀಕ್ಷಿಸಿದ್ದರು. ಗುರುವಾರ ರಾತ್ರಿ ವೇಳೆ ಜೈಲು ಆವರಣದ ದೇವಿ ಗುಡಿಗೆ ದೂರದಿಂದಲೇ ನಮಿಸಿ ಪ್ರಾರ್ಥಿಸಿದ್ದರು. ಆದರೆ, 3ನೇ ದೂರಿನಲ್ಲಿ ಜಾಮೀನು ದೊರೆತಿದ್ದರೂ ಬಿಎಸ್ ವೈಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
4ನೇ ದೂರಿನ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿವಿ ಪಿಂಟೋ ಅವರಿರುವ ಏಕಸದಸ್ಯ ಪೀಠ, ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರ ಪರ ವಕೀಲರ ವಾದ ಮಂಡನೆಗೆ ಕಾಲವಕಾಶ ಬೇಕಾಗಿರುವುದರಿಂದ ಮುಂದಿನ ವಿಚಾರಣೆಯನ್ನು ನ.8ಕ್ಕೆ ಮುಂದೂಡಿದ್ದಾರೆ.
ಪ್ರಸ್ತುತ ಕೇಸ್ ನಲ್ಲಿ 2ನೇ ದೂರಿನಲ್ಲಿ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 3ನೇ ದೂರಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. 4ನೇ ದೂರಿನ ವಿಚಾರಣೆ ನಡೆದು ಅದರಲ್ಲಿ ಜಾಮೀನು ದೊರೆತರೆ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಬೀಳಬಹುದು.












Click it and Unblock the Notifications