ರೈಲಿನಲ್ಲಿ ಕನ್ನಡತಿಗೆ ಸೈನಿಕರಿಂದ ಲೈಂಗಿಕ ಕಿರುಕುಳ
ಗೊಂಡಿಯಾ,
ನ. 2 : ಬೆಳಗಾವಿಯ ಕನ್ನಡತಿಯೊಬ್ಬಳ ಜೊತೆ ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಭಾರತೀಯ ಸೇನಾ ದಳದ 12 ಸೈನಿಕರ ವಿರುದ್ಧ ಸರಕಾರಿ ರೈಲ್ವೆ ಪೊಲೀಸ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದೆ. id="toptextpromo">ಘಟನೆ
ನಡೆದಿರುವುದು ಪುಣೆಗೆ ಹೊರಟಿದ್ದ ಆಜಾದ್ ಹಿಂದ್ ಸೂಪರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಎಸಿ ಬೋಗಿಯಲ್ಲಿ. ಮಹಿಳೆ ಒಬ್ಬಂಟಿಯಾಗಿದ್ದುದನ್ನು ಗಮನಿಸಿದ ಸೈನಿಕರು ಅವಾಚ್ಯ ಶಬ್ದಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಲೈಂಗಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ಸಹಪ್ರಯಾಣಿಕರು ವಿರೋಧಿಸಿದಾಗ ಅವರ ವಿರುದ್ಧವೇ ದಬ್ಬಾಳಿಕೆ ನಡೆಸಿದ್ದಾರೆ ಸೈನಿಕರು. ರಾಯಪುರ ದಾಟಿದ ನಂತರ ಕೇಳಲೂ ಅಸಹ್ಯವಾದ ಅಶ್ಲೀಲವಾದ ಪದಗಳಿಂದ ನಿಂದಿಸಿದ್ದಾರೆ. ಘಟನೆ ನಡೆದಿರುವುದು ಅ. 20ರಂದೇ ಆದರೂ ಅವರ ವಿರುದ್ಧ ಕೇಸ್ ದಾಖಲಾಗಿರುವುದು ಹತ್ತು ದಿನಗಳ ನಂತರವೆ.











Click it and Unblock the Notifications