ಬೆಂಗ್ಳೂರು ವಿವಿ ಕುಲಸಚಿವರಾಗಿ ಮೈಲಾರಪ್ಪ ನೇಮಕ

ಡಾ.ಬಿ.ಸಿ.ಮೈಲಾರಪ್ಪ ಅಲಿಯಾಸ್ ಚಿಕ್ಕಮೇಲೂರಪ್ಪ ಅವರನ್ನು ನೂತನ ಕುಲಸಚಿವರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅನುಮತಿ ನೀಡಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಕುಲಸಚಿವರಾಗಿರುವ ಡಾ.ಆರ್.ಎಂ.ರಂಗನಾಥ್ ಅವರ ಅಧಿಕಾರ ಅವಧಿ ಮುಗಿಯುವ ಮುನ್ನವೇ ಅವರನ್ನು ಎತ್ತಂಗಡಿ ಮಾಡಲಾಗಿದೆ. 2012ರ ಮೇ ತಿಂಗಳಲ್ಲಿ ರಂಗನಾಥ್ ಅವರ ಅವಧಿ ಮುಕ್ತಾಯವಾಗಲಿದೆ.
ಆದರೆ ಅವರನ್ನು ಎತ್ತಂಗಡಿ ಮಾಡಿ ಮೈಲಾರಪ್ಪ ಅವರನ್ನು ನೇಮಕ ಮಾಡಿರುವುದು ವಿ.ವಿ ಪ್ರಾಧ್ಯಾಪಕ ವಲಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಾಜಿ ಶಾಸಕರೊಬ್ಬರ ನೆರವಿನಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಕುಲಸಚಿವ ಸ್ಥಾನಕ್ಕೇರಿದ್ದಾರೆ ಎಂಬ ಸುದ್ದಿ ಹಬ್ಬಿದೆ.












Click it and Unblock the Notifications