ಗುರುವಾರ ರಾಯರ ಅನುಗ್ರಹ ಯಡ್ಡಿಗೆ ಒಲಿವುದೇ?

ರಾಘವೇಂದ್ರ ಸ್ವಾಮಿಗಳ ಭಕ್ತರಾದ ಯಡಿಯೂರಪ್ಪ ಅವರಿಗೆ ಗುರುವಾರದಂದು ಶುಭ ಸುದ್ದಿ ಸಿಗಲಿದೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ.
ಸಿರಾಜಿನ್ ಬಾಷಾ ಸಲ್ಲಿಸಿರುವ 2, 3, 6 ನೇ ದೂರಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಜಾಮೀನು ನೀಡದಿರುವಂತೆ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್ ಹನುಮಂತರಾಯ ಅವರು ಈಗಾಗಲೇ ವಾದ ಮಂಡಿಸಿದ್ದಾರೆ.
ಯಡಿಯೂರಪ್ಪ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮುಂದಿನ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ.
ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಪೂರ್ಣ ಪ್ರಮಾಣದ ಜಾಮೀನು ಅರ್ಜಿಯನ್ನು ಯಡಿಯೂರಪ್ಪ ಪರ ವಕೀಲ ಜಯಕುಮಾರ್ ಪಾಟೀಲ್ ಸಲ್ಲಿಸಿದ್ದರು. ಯಡಿಯೂರಪ್ಪ ಅವರ ವಿರುದ್ಧ ಸಿರಾಜಿನ್ ಬಾಷಾ ಅವರು ಒಟ್ಟು 15 ಕೇಸುಗಳು, 5 ದೂರುಗಳನ್ನು ಲೋಕಾಯುಕ್ತ ಕೋರ್ಟ್ ಗೆ ನೀಡಿದ್ದಾರೆ.












Click it and Unblock the Notifications