50 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಪ್ರಶಸ್ತಿ ಫಲಕ, ಹಾಗೂ ನಗದು ಬಹುಮಾನವನ್ನು ಒಳಗೊಂಡಿರುವ ಈ ಪ್ರಶಸ್ತಿ, ಕ್ರೀಡೆ, ಪತ್ರಿಕೋದ್ಯಮ, ಸಂಗೀತ, ಕಿರುತೆರೆ, ವೈದ್ಯಕೀಯ, ಜಾನಪದ, ಕೃಷಿ, ಸಮಾಜ ಸೇವೆ ಹಾಗೂ ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ. ಪತ್ರಿಕೋದ್ಯಮ ವಿಭಾಗದಲ್ಲಿ ಪ್ರತಾಪ ಸಿಂಹ, ಕೆ. ಎನ್. ತಿಲಕ್ ಕುಮಾರ್, ಜಗದೀಶ್ ಮಣಿಯಾಣಿ, ಜಿ. ಎಸ್ ಕುಮಾರ್ ಹಾಗೂ ಮಂಜುನಾಥ್ ಭಟ್ ಪಡೆದಿದ್ದಾರೆ.
ಸಂಗೀತ ವಿಭಾಗದಲ್ಲಿ ಎಚ್. ಫಲ್ಗುಣ, ಡಾ. ಬಾಲಚಂದ್ರ ನಾಕೋಡ್, ಗಣೇಶ್ ಪುತ್ತೂರು ಪಡೆದಿದ್ದರೆ ಸಾಹಿತ್ಯದಲ್ಲಿ ಶಾಂತಿನಾಥ ದಿಬ್ಬದ ಅವರಿಗೆ ಸಂದಿದೆ. ಕಿರುತೆರೆ ಹಾಗೂ ಸಿನಿಮಾ ವಿಭಾಗದಲ್ಲಿ ಕೆ. ಶಿವರುದ್ರಯ್ಯ, ಸರಿಗಮ ವಿಜಿ, ಎ. ಆರ್. ರಾಜು, ಕ್ರೀಡೆಯಲ್ಲಿ ತೇಜಸ್ವಿನಿಬಾಯಿ, ರಮೇಶ್ ಟೀಕಾರಾಮ್ ಮುಂತಾದವರು ಪಡೆದಿದ್ದಾರೆ.
ಒಟ್ಟಾರೆ 50 ಜನ ಈ ಬಾರಿಯ (2011) ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಪೂರ್ಣ ಪಟ್ಟಿಗೆ ನಿರೀಕ್ಷಿಸಿ.












Click it and Unblock the Notifications