ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ ಜನಸಾಮಾನ್ಯರಿಗೆ ಹಂಚಿದ ಪೋಸ್ಟ್ ಆಫೀಸ್

By Mahesh
|
Google Oneindia Kannada News

Haliyal Post office
ಹಳಿಯಾಳ, ಅ.28: ಜನರನ್ನು ಮಂಗ ಮಾಡುವುದಿದೆಯಲ್ಲ ಅದು ಸಾಮಾನ್ಯ ವಿದ್ಯೆಯಲ್ಲ ಬಿಡಿ ಮಾರಾಯ್ರೆ. ಕೆಲ ತಿಂಗಳುಗಳ ಹಿಂದೆ ಯಾರೋ ಹಬ್ಬಿಸಿದ ವದಂತಿಯನ್ನು ನಂಬಿಕೊಂಡ ಹಳಿಯಾಳ ಮತ್ತು ಸುತ್ತಮುತ್ತಲದ 15 ಗ್ರಾಮದ ಜನ ಕಾಕಿನಾಡದ ಜನರಂತೆ ಅಂಚೆ ಕಚೇರಿಗೆ ಮುಗಿ ಬಿದ್ದಿದ್ದರು.

ಖಾತೆ ತೆರೆಯಲು ಹಾತೊರೆಯಲು ಮೂರು ಮೂರು ವದಂತಿಗಳು ಇದ್ದವು. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ ಕೇಂದ್ರ ಸರ್ಕಾರವು ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ಭಾರತಕ್ಕೆ ವಾಪಸಾಗಲಿದ್ದು, ಇದರಲ್ಲಿ ಹಳ್ಳಿಗಳ ಪ್ರತಿಯೊಂದು ಕುಟುಂಬಕ್ಕೆ ತಲಾ 30 ಸಾವಿರ ರೂಪಾಯಿ ಜಮೆ ಆಗಲಿದೆ. ಆದರೆ ಅದಕ್ಕಾಗಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕಾಗುತ್ತದೆ ಎಂಬುದು ಮೊದಲನೇ ವದಂತಿಯಾಗಿತ್ತು.

ಯೋಗ ಗುರು ಬಾಬಾ ರಾಮದೇವ್ ಅವರು ವಿದೇಶಿ ಬ್ಯಾಂಕುಗಳಿಂದ ಇಲ್ಲಿಗೆ ಬರಲಿರುವ ಕಪ್ಪು ಹಣವನ್ನು ಪ್ರತಿಯೊಂದು ಕುಟುಂಬದ ಅಂಚೆ ಖಾತೆಗೆ ತಲಾ 3 ಲಕ್ಷದಂತೆ ಜಮೆ ವ್ಯವಸ್ಥೆ ಮಾಡಲಿದ್ದಾರೆ ಎಂಬುದು ಎರಡನೇ ವದಂತಿಯಾಗಿತ್ತು.

ಮೂರನೇ ವದಂತಿ: ಕೇಂದ್ರ ಸರ್ಕಾರವು ಪಡಿತರ ವಿತರಣೆ ವ್ಯವಸ್ಥೆಯನ್ನು ರದ್ದುಗೊಳಿಸಿ ಪ್ರತಿಯೊಂದು ಖಾತೆಗೆ ತಲಾ 5 ಸಾವಿರ ರೂಪಾಯಿ ಜಮೆ ಮಾಡಲಾಗುವುದು ಮತ್ತು ಪ್ರತಿ ತಿಂಗಳಿಗೆ 10 ಸಾವಿರ ರೂಪಾಯಿ ಜಮೆ ಮಾಡಲಾಗುವುದು.

ಆದ್ದರಿಂದ ಪ್ರತಿಯೊಂದು ಬಿಪಿಎಲ್ ಕಾರ್ಡುದಾರರು ಅಂಚೆ ಕಚೇರಿಯಲ್ಲಿ ಖಾತೆ ತರೆರೆಯಬೇಕು ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು.

ಅಂಚೆ ಕಚೇರಿಯಲ್ಲಿ 50 ರೂಪಾಯಿ ಹಾಗೂ ಒಂದು ಭಾವಚಿತ್ರ ಸಲ್ಲಿಸಿ ಅರ್ಜಿಗಳನ್ನು ಪಡೆದು ಖಾತೆ ತೆರೆಯಬೇಕಾಗಿತ್ತು. 50 ಖರ್ಚು ಮಾಡಿ ಅಪಾರ ಹಣ ಸಿಗುವ ನಿರೀಕ್ಷೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಅಂಚೆ ಕಚೇರಿಗ ನುಗ್ಗಿದ್ದರು.

ಕಪ್ಪುಹಣದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಬಿಪಿಎಲ್ ಚೀಟಿದಾರರಿಗೆ ಅಂಗಡಿಗಳಲ್ಲಿ ಪಡಿತರ ವಿತರಿಸುವ ಬದಲು, ಹಣ ಕೊಡುವ ಪ್ರಸ್ತಾವ ಇದೆ, ಆದರೆ ಭಾರೀ ಮೊತ್ತದ ಹಣ ಬರುವ ಸಾಧ್ಯತೆಯೂ ಇಲ್ಲ ಎಂದು ಅಂಚೆ ಕಚೇರಿ ಮುಖ್ಯಸ್ಥರು ತಿಳಿ ಹೇಳಿದ್ದಾರೆ.

English summary
Several months Uttar Kannada district Haliyal town Post office also witnessed similar to Kakinada post office incidence. Public rushed to post office to open account as rumour spreaded that Black money from Swiss bank has brought to all post office from Anna Hazare and Baba Ramdev.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X