ಸಂಭವನೀಯ ಲೋಕಾಯುಕ್ತ ನ್ಯಾ. ರವೀಂದ್ರನ್ ಕೂಡ ಭೂ ಕಳಂಕಿತರೇ!

ಲೋಕಾಯುಕ್ತ ಹುದ್ದೆಗೆ ವಿರೋಧ ಪಕ್ಷಗಳಿಂದ ಶಿಫಾರಸುಗೊಂಡಿದ್ದ ನ್ಯಾ. ಆರ್.ವಿ. ರವೀಂದ್ರನ್ ಅವರು ಕೂಡ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ (ಕೆಎಸ್‌ಜೆಡಿಇ ಎಚ್‌ಬಿಸಿಎಸ್) ಬೈಲಾ ಉಲ್ಲಂಘನೆ ಮಾಡಿರುವ ಬಗ್ಗೆ ದಾಖಲೆಗಳೂ ದೊರೆಯತೊಡಗಿವೆ.
ನ್ಯಾ. ಶಿವರಾಜ್ ಪಾಟೀಲ್ ಅಕಾಲಿಕವಾಗಿ ಲೋಕಾಯುಕ್ತ ಸ್ಥಾನ ತ್ಯಜಿಸುತ್ತಿದ್ದಂತೆ ಬೇರೆ ಯಾಋನ್ನು ಆ ಪೀಠದಲ್ಲಿ ಕೂಡಿಸಬೇಕು ಎಂಬ ಬಗ್ಗೆರ ಮಂತ್ರಾಲೋಚನೆ ನಡೆದಿತ್ತು. ಆಗ ನ್ಯಾ. ರವೀಂದ್ರನ್ ಅವರ ಹೆಸರು ಜೋರಾಗಿಯೇ ಕೇಳಿಬಂದಿತ್ತು. ಆದರೆ ಜೈಲುಪಾಲಾಗಿರುವ ಮಾಜಿ ಮುಖ್ಯಮಂತ್ರಿಯ ಒಲವು ಸಂಪಾದಿಸಿದ್ದರಿಂದ ನ್ಯಾ. ಬನ್ನೂರಮಠ ಅಂತಿಮವಾಗಿ ವಿಜಯದ ಬಗೆ ಬೀರಿದ್ದರು. ಆದರೆ ಈಗ ಎಲ್ಲವೂ ಅಯೋಮಯವಾಗಿದೆ.
ನ್ಯಾ. ರವೀಂದ್ರನ್ ಅವರು, ನಗರದ ಯಲಹಂಕದ ಬಳಿ 7,623 ಚದರ ಅಡಿಯ ನಿವೇಶನವನ್ನು 2.9 ಲಕ್ಷ ರೂಪಾಯಿಗಳಿಗೆ ಬೈಲಾ ಉಲ್ಲಂಘಿಸಿ ಖರೀದಿ ಮಾಡಿದ್ದಾರೆ. ಬನಶಂಕರಿ ಬಳಿ 75 ಸಾವಿರ ರೂಪಾಯಿಗೆ ಬಿಡಿಎಯಿಂದ 368.49 ಚದರ ಮೀಟರ್ ನಿವೇಶನವನ್ನೂ ಖರೀದಿ ಮಾಡಿದ್ದಾರೆ. ಇವುಗಳ ಜೊತೆ, ಬೆಂಗಳೂರು ಒಂದರಲ್ಲಿಯೇ ಅವರ ಪತ್ನಿ ಹೆಸರಿನಲ್ಲಿ ಆರು ನಿವೇಶನಗಳು ಇವೆ.
ವಿಶೇಷವೆಂದರೆ ಇವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಮೇಲೆ 1995ರಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ.












Click it and Unblock the Notifications