ಯಡ್ಡಿ ಎಫೆಕ್ಟ್: ಸಿದ್ದೇಶ್ವರ ಸ್ವಾಮಿಗೆ ಶೋಭಾ ಗುಪ್ತ ಪೂಜೆ

ಈ ಹಿಂದೆ ರೆಡ್ಡಿ ಬಳಗದಿಂದ ತಮ್ಮ ಸಚಿವ ಪದವಿ ಕಳೆದುಕೊಂಡಿದ್ದ ಸಮಯದಲ್ಲಿ ಆಪ್ತರ ಸಲಹೆ ಮೇರೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಸಚಿವ ಸ್ಥಾನ ಪಡೆದಿದ್ದರು. ಅದೇ ನಂಬಿಕೆಯ ಮೇಲೆ 'ಯಡಿಯೂರಪ್ನೋರ ಸಂಕಟಗಳಿಗೂ ಪರಿಹಾರ ನೀಡೋ ತಂದೆ' ಎಂದು ಈ ರಹಸ್ಯ ಪೂಜೆ ನಡೆಸಿರುವುದಾಗಿ ಶೋಭಾ ಆಪ್ತ ವಲಯ ಪಿಸುಗುಟ್ಟಿದೆ.
ಅಂದಹಾಗೆ ಅವರು ಭೇಟಿ ನೀಡಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ ಸುಪ್ರಸಿದ್ಧ ಗುರುಗಿರಿ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ. ಭೇಟಿ ಸಮಯದಲ್ಲಿ ಕೆಲವೇ ಮಂದಿ ಮಾತ್ರ ಹಾಜರಿದ್ದರು. ಇಲ್ಲಿನ ರೂಢಿಯಂತೆ ಸ್ಲೇಟ್ ಮೇಲೆ ಬರೆಯುವುದರ ಮೂಲಕ ಅವರು ಭವಿಷ್ಯವನ್ನೂ ಕೇಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಂತರ ಅವರು ಅರಸೀಕೆರೆ ತಾಲೂಕಿನಲ್ಲಿರುವ ಮಾಡಾಳು ಗೌರಮ್ಮನ ದರ್ಶನಕ್ಕೆ ತೆರಳಿದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.












Click it and Unblock the Notifications