ಬೆಂಗಳೂರಿನಲ್ಲಿ ಮೆಟಾಲಿಕ ರಾಕ್ ಬ್ಯಾಂಡ್

Metallica
ಬೆಂಗಳೂರು, ಅ. 27: ನಿನ್ನೆ ಬುಧವಾರ ನನ್ನ ಸ್ನೇಹಿತನೊಬ್ಬನ ಮನೆಗೆ ಹೋಗಿದ್ದೆ. ಅವನು ಬೆಂಗಳೂರಿನ ಒಂದು ಪ್ರೌಢಶಾಲೆಯಲ್ಲಿ 30 ವರ್ಷ ಮುಖ್ಯೋಪಾಧ್ಯಾಯನಾಗಿ ದುಡಿದು ಇದೀಗ ನಿವೃತ್ತಿ ಹೊಂದಿದ್ದಾನೆ. ಅವನಿಗೆ ಒಬ್ಬ ಮಗ. ಹೆಸರು ಗೋವಿಂದ. ವಯಸ್ಸು 21 ವರೆ.

ಗೋವಿಂದ. ಅಸಡ್ಡಾಳ ಹುಡುಗ. ಬರೀ ಚೈನೀ ಮಾಡ್ತಾನ. ಏನೋನೋ ಕಷ್ಟಪಟ್ಟು ಪಿಯು ಪಾಸಾಗಿ ಹಂಗೂಇಂಗೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡ. ಈಗ ಅವನು 1st BE ವಿದ್ಯಾರ್ಥಿ. ಕಂಪ್ಯೂಟರ್ ಸೈನ್ಸ್.

ಅಪ್ಪ ಅಮ್ಮನ ಬಳಿ ಅವನದು ಒಂದೇ ವರಾತ. 4 ಸಾವಿರ ರೂಪಾಯಿ ಅರ್ಜೆಂಟಾಗಿ ಬೇಕಂತ ಹಠ ಮಾಡ್ತಿದ್ದ. ಯಾಕಂದ್ರೆ, ಬರೋ ಭಾನುವಾರ ಬೆಂಗಳೂರಿನಲ್ಲಿ ಮ್ಯೂಸಿಕ್ ಕನ್ಸರ್ಟ್ ಇದೆ. ಅವನ ಫ್ರೆಂಡ್ಸ್ ಎಲ್ಲ ಹೋಗ್ತಾ ಇದಾರೆ. ಇವನೂ ಹೋಗಬೇಕು.

ಟಿಕೆಟ್ ಬೆಲೆಗಳು ಭಯಂಕರವಾಗಿವೆ. 3 ಲಕ್ಷ, 2 ಲಕ್ಷ, 25 ಸಾವಿರ, 15 ಸಾವಿರ, 2700, 1600 ರೂ ವರಸೆಗಳಲ್ಲಿವೆ. ಗೋವಿಂದನಿಗೆ ಒಂದೇ ಆಸೆ. 2700 ರೂ ಟಿಕೆಟ್ ಖರೀದಿಸಿ ಬೆಂಗಳೂರು ಅರಮನೆ ಮೈದಾನಕ್ಕೆ ನುಗ್ಗಬೇಕು. ಎಂಜಾಯ್ ಮಾಡಬೇಕು.

ಅವನಿಗೆ ಇನ್ನೂ ಒಂದು ಆಸೆ. ಟಿಕೆಟ್ ಖರೀದಿಸಿ ಉಳಿದ 1300 ರೂಪಾಯಿಯಲ್ಲಿ ಕಾಸಾ ಪಿಕೋಲಾಗೆ ಹೋಗಿ ಒಂದು ಬರ್ಗರ್ ತಿಂದು ಕೋಲಾ ಕುಡಿದು ಕುಪ್ಪಳಿಸಿ ಸರಿರಾತ್ರಿ ಫ್ರೆಂಡ್ ಮೋಟಾರ್ ಬೈಕಿನಲ್ಲಿ ಬಂದು ಮನೆ ಸೇರಿಕೊಳ್ಳಬೇಕು.

ಹಗಲು ರಾತ್ರಿ ಕನಸು ಮನಸಿನಲ್ಲಿ ಗೋವಿಂದನನ್ನು ಕೆಣಕುತ್ತಿರುವ ರಾಕ್ ಬ್ಯಾಂಡ್ ನಡೆಸಿಕೊಡುತ್ತಿರುವವರು ಯೂನಿವರ್ಸ್ ಲ್ ಮ್ಯೂಸಿಕ್ ಗ್ರೂಪ್ (UMG)ಇದು ವರ್ಲಡ್ ಫೇಮಸ್ ಮ್ಯೂಸಿಕ್ ಕಂಪನಿ.

ವಿಶ್ವದ ನಾನಾ ಕಡೆ ಲೈವ್ ಇನ್ ಕಾನ್ಸರ್ಟ್ ಪ್ರದರ್ಶನಗಳನ್ನು ನೀಡುವ ಸಂಸ್ಥೆಯ ಕೇಂದ್ರ ಕಚೇರಿ ಅಮೆರಿಕಾದಲ್ಲಿದೆ. ಸಂಗೀತ ಉದ್ಯಮದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಸಂಸ್ಥೆಯ ಒಡೆತನ ಫ್ರಾನ್ಸಿನ ವಿವಂಡಿ.

ಒಂದು ನೂರು ದಶಲಕ್ಷ ಆಲ್ಬಂಮ್ಮುಗಳು ಹೊರತಂದಿರುವ, 9 ಗ್ರಾಮಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ Metallica ರಾಕ್ ಬ್ಯಾಂಡ್ ಬಜಾಯಿಸುವ ಹುಡುಗರು ಇದೀಗ ಬೆಂಗಳೂರಿಗೆ ಬರುತ್ತಿದ್ದಾರೆ. Sonisphere Festival ಸಾದರ ಪಡಿಸುತ್ತಿರುವ ಮೆಟಾಲಿಕಾ ಇಂಡಿಯಾ ಟೂರ್ 2011 ರಲ್ಲಿ ತಾನೂ ಭಾಗವಹಿಸಬೇಕೆನ್ನುವುದು ಗೋವಿಂದನ ಅದಮ್ಯ ಹಂಬಲವಾಗಿದೆ.

ಅಕ್ಟೋಬರ್ 30 ಭಾನುವಾರ ಸಂಜೆ ಬೆಂಗಳೂರು ಅರಮನೆ ಮೈದಾನದಲ್ಲಿ ಶೋ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+