ನ್ಯಾ. ಎಸ್.ಆರ್. ಬನ್ನೂರುಮಠ ಕರ್ನಾಟಕದ ನೂತನ ಲೋಕಾಯುಕ್ತ

ಕಾನೂನುಬಾಹಿರವಾಗಿ ಹೌಸಿಂಗ್ ಸೊಸೈಟಿಯಿಂದ ನಿವೇಶನ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಅಪಪ್ರಚಾರಕ್ಕೆ ಮನ ನೊಂದ ಲೋಕಾಯುಕ್ತ ನ್ಯಾ. ಶಿವರಾಜ್ ಪಾಟೀಲ್ ತಮ್ಮ ಸ್ಥಾನಕ್ಕೆ ಸೆ.19 ರಂದು ರಾಜೀನಾಮೆ ಸಲ್ಲಿಸಿದ್ದರು.
ನ್ಯಾ. ಪಾಟೀಲ್‌ರ ಅಕಾಲಿಕ ನಿರ್ಗಮನದ ನಂತರ ಒಂದು ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇತ್ತು. ಲೋಕಾಯುಕ್ತ ಹುದ್ದೆಗೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಹಾಗೂ ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಸೋಧಿ ಮತ್ತು ನ್ಯಾ. ಬನ್ನೂರಮಠ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು. ಪ್ರತಿಪಕ್ಷಗಳು ನ್ಯಾ. ಆರ್.ವಿ. ರವೀಂದ್ರನ್ ಅರವ ಬಗ್ಗೆ ಒಲವು ವ್ಯಕ್ತಪಡಿಸಿದ್ದರೆ, ಸರಕಾರ ನ್ಯಾ. ಬನ್ನೂರಮಠ ಹೆಸರು ಅಖೈರುಗೊಳಿಸಿದೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿಯವರು ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದು ತಿಳಿಸಿದ್ದಾರೆ. ರಾಜ್ಯಪಾಲರು ದೆಹಲಿಗೆ ತೆರಳಿದ್ದು, ನ. 1ರಂದು ವಾಪಸಾಗಲಿದ್ದಾರೆ. ದೆಹಲಿಯಲ್ಲಿ ರಾಜ್ಯಪಾಲರ ಸಮ್ಮೇಳನ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದಾರೆ. ಅವರು ಬಂದ ನಂತರವೇ ಲೋಕಾಯುಕ್ತರ ನೇಮಕದ ಆದೇಶ ಹೊರಬೀಳಲಿದೆ












Click it and Unblock the Notifications