ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಯಾರು, ಏನು, ಎತ್ತ?

ಮೂಲತಃ ಧಾರವಾಡ ಜಿಲ್ಲೆಯವರಾದ ನ್ಯಾ. ಬನ್ನೂರಮಠ 1973ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಸರಕಾರಿ ಅಭಿಯೋಜಕ ಮತ್ತು ಸರಕಾರಿ ವಕೀಲರಾಗಿ ಏಳು ವರ್ಷ ಸೇವೆ ಸಲ್ಲಿಸಿದರು. 1997ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಧೀಶರಾಗಿ ನೇಮಕಗೊಂಡ ನ್ಯಾ. ಬನ್ನೂರಮಠ ಜೂನ್ 3, 1999ರಲ್ಲಿ ಖಾಯಂ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡರು. ನಂತರ 2009ರಲ್ಲಿ ಕೇರಳ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಪದನ್ನೋತಿ ಪಡೆದು 2010ರ ಜನವರಿಯಲ್ಲಿ ನಿವೃತ್ತಿ ಹೊಂದಿದರು.
ಈ ಮಧ್ಯೆ, ಬನ್ನೂರಮಠ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಉಪಲೋಕಾಯುಕ್ತ ಮಜಗೆ ಅವರೂ ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಖಾಲಿ ಇರುವ ಇನ್ನೊಂದು ಉಪಲೋಕಾಯುಕ್ತ ಹುದ್ದೆಗೆ ಅನ್ಯ ಸಮುದಾಯದವರೊಬ್ಬರನ್ನು ಆಯ್ಕೆ ಮಾಡಲು ಸರ್ಕಾರ ಮುಂದಾಗಿದೆ.
ಹಿಂದೆ ಮಜಗೆ ಅವರೊಬ್ಬರೇ ಉಪಲೋಕಾಯುಕ್ತರಾಗಿದ್ದರು. ಆಗ ಶಿವರಾಜ್ ಪಾಟೀಲ್ ಅವರನ್ನು ನೇಮಕ ಮಾಡುವ ಸಂದರ್ಭ ಎರಡೂ ಹುದ್ದೆಗಳು ಲಿಂಗಾಯತ ಸಮುದಾಯದ ಪಾಲಾಗುತ್ತವೆ ಎಂಬ ಆರೋಪ ಕೇಳಿಬರುತ್ತದೆ ಎಂಬ ಕಾರಣಕ್ಕಾಗಿಯೇ ಮತ್ತೂಂದು ಉಪಲೋಕಾಯುಕ್ತ ಹುದ್ದೆಯನ್ನು ಸೃಷ್ಟಿಸಿ ಗುರುರಾಜ್ ಅವರನ್ನು ನೇಮಿಸಲಾಗಿತ್ತು. ಅವರೂ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications