ಬಿಜೆಪಿ ಹಗೆಗೆ ತಕ್ಕ ಉತ್ತರ ನೀಡುವೆ: ಎಚ್ ಡಿ ದೇವೇಗೌಡ

HD Deve Gowda
ಬೆಂಗಳೂರು, ಅ.27: ಈ ಹಿಂದಿನ ಸರ್ಕಾರಗಳು ಕೃಷ್ಣಾ ಮೇಲ್ದಂಡೆ ಯೋಜನೆ ಅಕ್ರಮ ಆರೋಪಗಳು ನಿರಾಧಾರ ಎಂದು ಪ್ರಕರಣಕ್ಕೆ ಇತಿಶ್ರೀ ಹಾಡಿದ ಮೇಲೂ ಬಿಜೆಪಿ ಹಳೆ ಕೇಸ್ ರೀ ಓಪನ್ ಮಾಡಿರುವುದು ನೀಚ ಕೆಲಸ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದ್ದಾರೆ.

ಕೆಐಎಡಿಬಿ ಭೂ ಹಗರಣ, ಗಣಿ ಹಗರಣ, ಜಮೀನು ಡಿನೋಟಿಫಿಕೇಷನ್‌ ಪ್ರಕರಣಗಳಲ್ಲಿ ಆಡಳಿತಾರೂಢ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸಮೇತ ಮೂವರು ಮಾಜಿ ಸಚಿವರು ಜೈಲು ಪಾಲಾಗಿದ್ದಾರೆ.

ಈ ಸಂದರ್ಭದಲ್ಲಿ ಸುಮಾರು 16 ವರ್ಷದ ಹಿಂದಿನ ಪ್ರಕರಣಕ್ಕೆ ಮತ್ತೆ ಜೀವ ಕೊಟ್ಟಿರುವುದು ಬಿಜೆಪಿ ಸರ್ಕಾರದ ರಾಜಕೀಯ ದ್ವೇಷ ಯಾವ ಹಂತ ಮುಟ್ಟಿದೆ ಎಂಬುದನ್ನು ತೋರಿಸುತ್ತದೆ.

ಯಾವ ಮಟ್ಟದ ತನಿಖೆಗೆ ಬೇಕಾದರೂ ನಾನು ಸಹಕರಿಸಲು ಸಿದ್ಧ. ಆರೋಪಿತ ಅಧಿಕಾರಿಗಳು ಕೂಡಾ ಶುದ್ಧಹಸ್ತರಾಗಿ ಹೊರಬರಲಿದ್ದಾರೆ. ನನ್ನ ಬೆಂಬಲ ಎಲ್ಲಾ ಅಧಿಕಾರಿಗಳಿಗಿದೆ ಎಂದು ದೇವೇಗೌಡರು ಹೇಳಿದ್ದಾರೆ.

1995-98ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು, ಗುತ್ತಿಗೆದಾರರು, ಅಧಿಕಾರೇತರರು, ಸಿಬ್ಬಂದಿ ಹಾಗೂ ಇತರರ ಹೆಸರುಗಳನ್ನು ಹಗರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಬಹು ಕೋಟಿ ತುಂಡು ಗುತ್ತಿಗೆ ದೋಷಾರೋಪಣ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರ ಹೆಸರು ಸೇರಿಸಿಲ್ಲ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+