ನಮ್ಮ ಸಿಎಂ ಸದಾನಂದಗೆ ಆಗಿದ್ದು ಮೋದಿಗೆ ಯಾಕಾಗೊಲ್ಲ?

Sadananda Gowda alongwith his wife Datty
ಬೆಂಗಳೂರು, ಅ. 25: ನಮ್ಮ ಮುಖ್ಯಮಂತ್ರಿ ಸದಾನಂದ ಗೌಡರೇನೋ ನಿಯತ್ತಾಗಿ ತಮ್ಮ ಆಸ್ತಿ ವಿವರದ ಪ್ರವರ ಒಪ್ಪಿಸಿ, ಕೃತಾರ್ಥರಾಗಿದ್ದಾರೆ. ಆದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಏನಾಗಿದೆ? 'ನನ್ನ ಆಸ್ತಿಪಾಸ್ತಿ ನನ್ನದು. ಅದರ ವಿವರವನ್ನೆಲ್ಲ ಕೇಳಬೇಡಿ' ಎಂದು ಮಾರುತ್ತರ ನೀಡಿದ್ದಾರೆ. ಅಷ್ಟೇ ಅಲ್ಲ ಅವಯ್ಯ ಮೋದಿ ತಾನು ಮೂರು ದಿನಗಳ ಕಾಲ ನಡೆಸಿದ ಸದ್ಭಾವನಾ ಉಪವಾಸದ ವೆಚ್ಚದ ಬಿಲ್ ನೀಡಲೂ ಸಹ ಬಿಲ್ಕುಲ್ ಒಪ್ಪಿಲ್ಲ.

ಸದ್ಭಾವನಾ ಉಪವಾಸದಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡು ಮರಳಿದ್ದ ಅದ್ಯಾರೋ ಪುಣ್ಯಾತ್ಮ (ಸದಾನಂದ ಗೌಡ?) 'ನಮ್ಮ ಕರ್ನಾಟಕವನ್ನೂ ಗುಜರಾತ್ ಮಾದರಿ ಮಾಡುತ್ತೇನೆ' ಎಂದು ಜಪಿಸಿದ್ದರು. ಆದರೆ ಇದಕ್ಕೆ ಪ್ರತಿಯಾಗಿ 'ನಾನೂ ಆಸ್ತಿ ವಿವರ ಸಲ್ಲಿಸಿದ್ದೇನೆ. ನೀವೂ ಅತ್ಲಾಗೆ ಆಸ್ತಿ ವಿವರ ಸಲ್ಲಿಸಿಬಿಡಿ' ಎಂದು ಮೋದಿಯನ್ನು ಕೇಳುವ ದಾರ್ಷ್ಯ ತೋರುತ್ತಾರಾ!?

ಆಗ, ಮೋದಿ ಪರ ಗುಜರಾತ್ ಸರಕಾರ ಇದಕ್ಕೆ ಏನು ಉತ್ತರ ನೀಡಬಹುದು ಗೊತ್ತಾ! 'ಅಯ್ಯೋ ಪ್ಯಾದೆ. ನಿಮಗೇನೋ ವಿಚಾರಿಸಿಕೊಳ್ಳೋಕೆ ಲೋಕಾಯುಕ್ತರು ಅಂತ ಇದ್ದಾರೆ. ನಮ್ಮಲ್ಲಿ ಆ ಸಂಸ್ಥೆಯೇ ಇಲ್ಲಾ. ಅದಕ್ಕೇ ನಮ್ಮ ಮೋದಿ ಸಾಹೇಬರು ಆಸ್ತಿ ವಿವರ ಸಲ್ಲಿಕೆಗೆ ಬಾಧ್ಯಸ್ಥರಲ್ಲ' ಎನ್ನಬಹುದೇನೋ? ಅದೆಲ್ಲ ಒತ್ತಟ್ಟಿಗಿರಲಿ. ವಿಷಯ ಏನಪಾ ಅಂದರೆ...

ಅಹಮದಾಬಾದಿನ ಆರ್ ಟಿಐ ಕಾರ್ಯಕರ್ತ ಭರತ್ ಸಿನ್ಹ್ ಝಾಲಾ ಅವರು ಜುಲೈ 13, 2011ರಂದು ಮುಖ್ಯಮಂತ್ರಿ ಮೋದಿಯ ಆಸ್ತಿಪಾಸ್ತಿ ವಿವರ ಕೊಡಿ ಎಂದು ಅರ್ಜಿ ಗುಜರಾಯಿಸಿದ್ದರು. ಆದರೆ ಈ ಕ್ಷಣದ ವರೆಗೂ 'ಅಪ್ಲೆ ಅಪ್ಲೆ - ನೋ ರಿಪ್ಲೆ' ಎಂಬಂತಾಗಿದೆ ಭರತ್ ಸಿನ್ಹ್ ಪರಿಸ್ಥಿತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+