ಷಟ್ಟಥ ರಸ್ತೆ ಕನಸು ನನಸು: ಚೆನ್ನೈಗೆ ಇನ್ನು ಮೂರೇ ಗಂಟೆ

ಸದ್ಯಕ್ಕೆ 344 ಕಿ.ಮೀ. ದೂರದಲ್ಲಿರುವ ಚೆನ್ನೈಗೆ ತಲುಪಲು 6 ಗಂಟೆ ಹಿಡಿಸುತ್ತಿದೆ. ಷಟ್ಪಥ ಕಾರ್ಯಗತವಾದ ಬಳಿಕ ದೂರ 86 ಕಿ.ಮೀ. ಕಡಿಮೆಯಾಘಲಿದ್ದು, 258 ಕಿ.ಮೀ. ಗಳಲ್ಲಿ ಕೇವಲೊ 3 ಗಂಟೆ ಕಾಲದಲ್ಲಿ ಚೆನ್ನೈ ತಲುಪಬಹುದಾಗಿದೆ.
ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ-ನಿರ್ವಹಣೆ-ಹಸ್ತಾಂತರ (ಬಿಒಟಿ) ಕರಾರಿನಡಿ ಇದು ನಿರ್ಮಾಣವಾಗಲಿದೆ. ಬೆಂಗಳೂರು ಬಳಿಯ ಹೊಸಕೋಟೆಯಿಂದ ಆರಂಭವಾಗಲಿರುವ ಇದು ಕೋಲಾರ, ಪಲಮನೇರು, ಆಂಧ್ರದ ಚಿತ್ತೂರು, ರಾಣಿಪೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಮಾನಾಂತರವಾಗಿ ಹಾದುಹೋಗಲಿದೆ.
ಈ ರಸ್ತೆ ಹಾದು ಹೋಗುವ ಉದ್ದ ಕರ್ನಾಟಕದಲ್ಲಿ 74 ಕಿ.ಮೀ, ಆಂಧ್ರದಲ್ಲಿ 90 ಹಾಗೂ ತಮಿಳುನಾಡಿನಲ್ಲಿ 94 ಕಿ.ಮೀ ಇರಲಿದೆ. ಪ್ರತಿ ಕಿ.ಮೀ. ರಸ್ತೆ ನಿರ್ಮಾಣಕ್ಕೆ 18ರಿಂದ 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಸಲುವಾಗಿ ಮೂರು ತಿಂಗಳೊಳಗೆ ಎಕ್ಸ್‌ಪ್ರೆಸ್ ಮಾರ್ಗ ಪ್ರಾಧಿಕಾರ ರಚಿಸಲು ಸಚಿವಾಲಯ ಚಿಂತಿಸುತ್ತಿದೆ.
2012ರ ಆರಂಭದಲ್ಲಿ ಈ ಕಾಮಗಾರಿ ಶುರುವಾಗಲಿದ್ದು, ನಂತರದ 3-4 ವರ್ಷಗಳಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಬೆಂಗಳೂರು- ಚೆನ್ನೈ ಪ್ರಯಾಣ ಅವಧಿ 3 ಗಂಟೆ ಇರುತ್ತದೆ. ಮಾರ್ಗದುದ್ದಕ್ಕೂ ಎರಡೂ ಬದಿ ತಡೆಗೋಡೆ ಹೊಂದಿದ ಇಂತಹ ರಸ್ತೆ ರಾಷ್ಟ್ರದಲ್ಲಿ ಇದೇ ಮೊದಲಾಗಲಿದೆ.












Click it and Unblock the Notifications