ಫಾರ್ ಎ ಚೇಂಜ್, ಹೆಣ್ಣು ಜನಿಸಿದ್ದಕ್ಕೆ ತಂದೆಯೇ ಆತ್ಮಹತ್ಯೆ

wife-gives-birth-to-girl-child-father-hangs-self
ಬೆಂಗಳೂರು, ಅ. 22: ತನಗೆ ಹೆಣ್ಣು ಮಗುವಾಯಿತೆಂದು ಕನ್ಯಾಪಿತೃ ಹೆತ್ತಮ್ಮನಿಗೆ ಚಿತ್ರ ಹಿಂಸೆ ನೀಡುವುದು, ಸಾಯಿಸುವುದು ಇಲ್ಲವೇ ಆಗತಾನೇ ಹುಟ್ಟಿದ ಹೆಣ್ಣು ಮಗುವನ್ನೇ ಸಾಯಿಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗುತ್ತಿದೆ. ಆದರೆ ಫಾರ್ ಎ ಚೇಂಜ್, ಹೆಣ್ಣು ಮಗು ಜನಿಸಿತೆಂದು ನೊಂದು ಕೊಂಡು ತಂದೆಯೇ ಆತ್ಮಹತ್ಯೆ ಮಾಡಿಕೊಂಡ ಮತಿಹೀನ ಕೃತ್ಯವೊಂದು ನಡೆದಿದೆ.

ಇದು ಇತರರಿಗೆ ಪಾಠವಾಗುವುದು ಬೇಡ. ಆದರೆ ಈ ಬಗ್ಗೆ ಎಚ್ಚರಿಕೆ, ಜಾಗೃತಿ ಮೂಡಿದರೆ ಸಾಕು. ಮೂರನೇ ಬಾರಿಯೂ ಹೆಣ್ಣು ಮಗು ಜನಿಸಿತೆಂದು ಮನನೊಂದ ತಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯನಗರ ಸಮೀಪದ ಗಾಯಿತ್ರಿ ನಗರದಲ್ಲಿ ನಡೆದಿದೆ.

ಗಾಯಿತ್ರಿ ನಗರ ಎಂಟನೇ ಅಡ್ಡರಸ್ತೆ ನಿವಾಸಿ ಲಕ್ಷ್ಮಣ (30) ಆತ್ಮಹತ್ಯೆ ಮಾಡಿಕೊಂಡವರು. ಕಾರು ಚಾಲಕರಾಗಿದ್ದ ಲಕ್ಷ್ಮಣ, ಪತ್ನಿ ಅಲುಮೇಲಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಅಲುಮೇಲಮ್ಮ ಅವರು ಹೆರಿಗೆಗಾಗಿ ಒಂದೂವರೆ ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು. ಅವರಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಮೂರನೇ ಬಾರಿಯೂ ಹೆಣ್ಣು ಮಗು ಜನಿಸಿದ್ದರಿಂದ ಬೇಸರಗೊಂಡ ಲಕ್ಷ್ಮಣ ಅ. 19ರಂದು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಲಕ್ಷ್ಮಣನ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಠಾಣೆಗೆ ಶುಕ್ರವಾರ ಮಾಹಿತಿ ನೀಡಿದರು. ಮನೆಯ ಬಳಿ ತೆರಳಿ ಪರಿಶೀಲಿಸಿದಾಗ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+