ಭೂ ಚಕ್ರದ ಸುಳಿಯಲ್ಲಿ ಸಚಿವ ಮೈಸೂರು ರಾಮದಾಸ್ ?

ಸಚಿವ ರಾಮದಾಸ್ 1995ಕ್ಕೂ ಮುನ್ನ ಮೈಸೂರಿನ ಮಳಲವಾಡಿಯಲ್ಲಿ ಭೂಮಿತಿ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಜಮೀನಿನ ಖಾತಾ ಮಾಡಿಸಿ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಅಲ್ಲದೆ 2008ರಲ್ಲಿ ಕೃಷ್ಣ ಎನ್ನುವವರು ಜಿಲ್ಲಾಧಿಕಾರಿಗೆ ಮತ್ತೆ ದೂರು ಸಲ್ಲಿಸಿದ್ದರು. ಆಗಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಮಣಿವಣ್ಣನ್ ಸಚಿವರ ವಿರುದ್ದ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿದ್ದರು. ಅಂದಿನಿಂದ ಮಂದಗತವಾಗಿ ಪ್ರಕರಣ ಚಾಲ್ತಿಯಲ್ಲಿದೆ.
ಕೇಸ್ ಆಮೆಗತಿಯಲ್ಲಿ ಸಾಗುತ್ತಿದ್ದನ್ನು ಮನಗಂಡ ಕೃಷ್ಣ ನೇರವಾಗಿ ರಾಜ್ಯಪಾಲ ಭಾರದ್ವಾಜ್ ಅವರಿಗೆ ದೂಸು ಸಲ್ಲಿಸಿದ್ದಾರೆ.ರಾಜ್ಯಪಾಲರು ಈ ಸಂಬಂಧ ಕಡತಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಕೃಷ್ಣ ಲೋಕಾಯುಕ್ತರಿಗೂ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.
ಕಾಂಗ್ರೆಸ್ ಆರೋಪ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಮದಾಸ್ ಎರಡರಿಂದ ಮೂರು ಸಾವಿರ ಎಕರೆ ಭೂಹಗರಣ ನಡೆಸಿದ್ದು ಸದ್ಯದಲ್ಲೇ ಅದೆಲ್ಲಾ ಬಯಲಿಗೆ ಬರಲಿದೆ. ಅನೇಕ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರಕಾರವನ್ನು ವಜಾಗೊಲಿಸ ಬೇಕೆಂದು ಕಾಂಗ್ರೆಸ್ ರಾಜ್ಯಪಾಲರಲ್ಲಿ ಮನವಿ ಮಾಡಿದೆ.












Click it and Unblock the Notifications