ಜಯನಗರ ಸಾಯಿ ಲಾಡ್ಜ್ ಮ್ಯಾನೇಜರ್ ಮರ್ಡರ್

9ನೇ ಬ್ಲಾಕ್ ನ 40ನೇ ಅಡ್ಡರಸ್ತೆಯಲ್ಲಿರುವ ಶ್ರೀ ಸಾಯಿಲಾಡ್ಜ್ ಹಾಗೂ ಗೆಸ್ಟ್ ಹೌಸ್ ನ ಮ್ಯಾನೇಜರ್ ನ ವಿನೋದ್ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಮುಂಜಾನೆ ವೇಳೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ವಿನೋದ್(35) ಕೊಲೆ ಮಾಡಿರುವ ಸಾಧ್ಯತೆಯಿದೆ. ಹೋಟೆಲ್ ನ ಮಾಜಿ ಕೆಲಸಗಾರರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ ಎಂದು ತಿಲಕ್ ನಗರ ಪೊಲೀಸ್ ಠಾಣಾಧಿಕಾರಿಗಳು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಿನೋದ್ ಅವರ ಕುಟುಂಬದವರು ಅಸ್ಸಾಂನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications