ರೆಡ್ಡಿ ಆಪ್ತರಿಗೆ ನಡುಕ ಹುಟ್ಟಿಸಿದ ಸಿಬಿಐ

ಎಎಂಸಿ ಮತ್ತು ಓಎಂಸಿ ವ್ಯವಹಾರಗಳು, ಅಕ್ರಮ - ಅನಧಿಕೃತ ಗಣಿಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಕೋಟ್ಯಾಂತರ ರೂಪಾಯಿ ಹಣವನ್ನು ಗಳಿಸಿರುವ ಆರೋಪ ಎದುರಿಸುತ್ತಿರುವ ಸಂಡೂರುನ ಎಸ್ಟಡಿ ಮಂಜು ಅಲಿಯಾಸ್ ಈ ಮಂಜುನಾಥ ಮತ್ತು ಹೊಸಪೇಟೆಯ ಖಾರದಪುಡಿ ಮಹೇಶಗೆ ಸಿಬಿಐ ಅಧಿಕಾರಿಗಳು ನೋಟೀಸ್ ಜಾರಿ ಮಾಡಿ, ಶುಕ್ರವಾರ ವಿಚಾರಣೆಗೆ ಕರೆಯಿಸಿಕೊಂಡಿದ್ದಾರೆ.
ಬಳ್ಳಾರಿಯ ಅಮೆರಿಕನ್ ಗೆಸ್ಟ್‌ಹೌಸ್‌ನಲ್ಲಿ ನಾಲ್ಕು ಕೋಣೆಗಳ ತಾತ್ಕಾಲಿಕ ಕಚೇರಿಯನ್ನು ಪ್ರಾರಂಭಿಸಲಿರುವ ಸಿಬಿಐ - ಕರ್ನಾಟಕದ ಅಧಿಕಾರಿಗಳ ತಂಡ, ಲೋಕಾಯುಕ್ತ ವರದಿಯಲ್ಲಿ ನಮೂದಾಗಿರುವ ವಿವಿಧ ಗಣಿ ಕಂಪನಿಗಳಿಗೆ ನೋಟೀಸ್ ನೀಡಿ ಕಳೆದ ಆರು ವರ್ಷಗಳ ಒಟ್ಟಾರೆ ವ್ಯವಹಾರದ ಮಾಹಿತಿ ನೀಡಿ ಎಂದು ತಿಳಿಸುತ್ತಿದ್ದಾರೆ.
ಈ ಇಬ್ಬರು ಆರೋಪಿಗಳು ಸಿಬಿಐನ ವಿಚಾರಣೆಗೆ ಬೆಳಗ್ಗೆ 11 ಗಂಟೆಯಿಂದ ಹಾಜರಾಗಿದ್ದು, ತೀವ್ರವಾದ ವಿಚಾರಣೆ ನಡೆದಿದೆ. ಆರೋಪಿಗಳನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.












Click it and Unblock the Notifications