ಎಚ್ಡಿಕೆ ದಂಪತಿ ಪ್ರಕರಣ ರದ್ದು ಹೈಕೋರ್ಟ್ ತೀರ್ಪು

ಸಂಸದ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ದೂರು ಸಲ್ಲಿಸಲಾಗಿದೆ. ಎಚ್ಡಿಕೆ ದಂಪತಿಯಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಸರ್ಮಥಿಸಲು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.
ದೂರು ನೀಡಿರುವ ವಿನೋದ್ ಕುಮಾರ್ ಅವರು ದೃಢೀಕರಣ ಪತ್ರ ಸಲ್ಲಿಸದ ಕಾರಣ ಇಡೀ ಪ್ರಕರಣವನ್ನು ನ್ಯಾಯಾಧೀಶ ಜಗನ್ನಾಥನ್ ಅವರು ರದ್ದುಗೊಳಿಸಿದ್ದಾರೆ. ಫಿರ್ಯಾದುದಾರ ವಿನೋದ್ ಕುಮಾರ್ ಅವರಿಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದು ಕೋರ್ಟ್ ಗೆ ನೀಡಿಲ್ಲ. ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಪಾಲರ ಆನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಎನ್ ಜಗನ್ನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications