ಕಾನೂನು ಸಮರ ಎದುರಿಸಲು ಸಿದ್ಧ: ಅಶೋಕ್

ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಹಾಗೂ ನಾನು ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆ. ವಿಪಕ್ಷಗಳ ಪಿತೂರಿಗೆ ಬಲಿಯಾಗಲಾರೆ ಎಂದು ಅಶೋಕ್ ಹೇಳಿದ್ದಾರೆ.
ಗೃಹ ಸಚಿವರ ಮೇಲೆ ತನಿಖೆಗೆ ಆದೇಶ ಹೊರಬಿದ್ದಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಆರ್ ಅಶೋಕ್ ಅವರು ರಾಜೀನಾಮೆ ನೀಡಬೇಕು. ನಾವು ಅಶೋಕ್ ಅವರ ರಾಜೀನಾಮೆಗೆ ಕ್ಷಣಗಣನೆಯಲ್ಲಿದ್ದೇವೆ ಎನ್ನುತ್ತಿದ್ದಾರೆ ವಿಪಕ್ಷ ನಾಯಕರು ಹೇಳಿದ್ದರು.
ಅಶೋಕ್ ಅವರ ವಿರುದ್ಧ ಇದು ಎರಡನೇ ಬಾರಿ ದೂರು ದಾಖಲಾಗುತ್ತಿರುವುದು. ಆದರೆ, ಮೊದಲ ದೂರನ್ನು ಮುಚ್ಚಿಹಾಕಲಾಗಿದೆ.
ಈ ಬಾರಿ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ಅಶೋಕ್ ನೈತಿಕ ಹೊಣೆ ಹೊತ್ತು ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದರು.












Click it and Unblock the Notifications