ಚಂದ್ರೇಗೌಡರ ಕಾನೂನು ಪಾಠ ಅಗತ್ಯವಿಲ್ಲ: ರಾಜ್ಯಪಾಲ

'ಚಂದ್ರೇಗೌಡ ಯಾರೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನಗೆ ಚಂದ್ರೇಗೌಡರ ಕಾನೂನು ಪಾಠ ಬೇಕಿಲ್ಲ. ನಾನು ಕೂಡಾ ಕಾನೂನು ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಚಂದ್ರೇಗೌಡ ಬೇಕಾದ್ದು ಹೇಳಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳಲಿ. ನನಗೇನು ಅದರಿಂದ ತೊಂದರೆರೆಯಿಲ್ಲ' ಎಂದು ಭಾರದ್ವಾಜ್ ಹೇಳಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಹಾಗೂ ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವುದಾಗಿ ಚಂದ್ರೇಗೌಡ ಹೇಳಿದ್ದರು.
ವಕೀಲ ಸಿರಾಜಿನ್ ಬಾಷಾ ಅವರ ಖಾಸಗಿ ದೂರನ್ನು ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ನೋಡಿದರೆ ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ಪತನಕ್ಕೆ ವ್ಯವಸ್ಥಿತ ಸಂಚು ರೂಪಿಸಿದಂತೆ ತೋರುತ್ತದೆ ಎಂದು ಚಂದ್ರೇಗೌಡ ಆರೋಪಿಸಿದ್ದರು.
ಅದರೆ, ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ಚಂದ್ರೇಗೌಡರ ಆರೋಪಗಳನ್ನು ತಳ್ಳಿಹಾಕಿದ್ದಾರೆ.












Click it and Unblock the Notifications