ಕಷಾಯ ಪ್ರಿಯ ಯಡಿಯೂರಪ್ಪಗೆ ಮಕ್ಕಳೆಂದರೆ ಇಷ್ಟ

BS Yeddyurappa pakka family man
ಬೆಂಗಳೂರು, ಅ.18: ಅಪ್ಪನಿಗೆ ಸಿಟ್ಟು ಜಾಸ್ತಿ ಅನ್ನೋದು ಲೋಕಕ್ಕೆ ಗೊತ್ತಿರುವ ವಿಷಯ. ಆದರೆ, ಮೊಮ್ಮಕ್ಕಳ ಜೊತೆ ಆಡುವುದೆಂದರೆ ಅವರಿಗೆ ಇಷ್ಟ. ಬಿಡುವು ಸಿಕ್ಕಾಗಲೆಲ್ಲಾ ಕುಟುಂಬ ಸಮೇತ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಅಪ್ಪನ ಸಿಟ್ಟಿಗೆ ನಾವೆಲ್ಲರೂ ಅಡ್ಜೆಸ್ಟ್ ಆಗಿಬಿಟ್ಟಿದ್ದೀವಿ ಆದರೆ, ಅವರ ಮೌನಿಯಾದರೆ ಎಲ್ಲರಿಗೂ ಭಯವಾಗುತ್ತೆ.

ಮನೆಯಲ್ಲಿದ್ದಾಗಲೆಲ್ಲಾ ಡಾಕ್ಟರ್ ಸಲಹೆಯಂತೆ ಡಯಾಬಿಟಿಸ್, ಬಿಪಿ ಮಾತ್ರೆಗಳನ್ನು ನೀಡುತ್ತೇನೆ. ಒಮ್ಮೆ ಆಂಜಿಯೋಗ್ರಾಮ್ ಮಾಡಿಸಿಕೊಳ್ಳಿ ಎಂದು ಕಳೆದ ತಿಂಗಳೇ ವೈದ್ಯರು ಸೂಚಿಸಿದ್ದರು.

ಆದರೆ, ವೈದ್ಯರ ಸಲಹೆಯನ್ನು ಲೆಕ್ಕಿಸದೆ ಕೊಪ್ಪಳ ಎಲೆಕ್ಷನ್ ಪ್ರಚಾರಕ್ಕಾಗಿ ಹೊರಟುಬಿಟ್ಟರು. ಅವರ ಶಿಸ್ತು, ಎಲ್ಲಾ ವಿಷಯಗಳನ್ನು ಅಚ್ಚುಕಟ್ಟುತನ ನೋಡಿ ಕಲಿಯುವುದು ಸಾಕಷ್ಟಿದೆ.

ಕಷಾಯ ಪ್ರಿಯ : ಅಪ್ಪನಿಗೆ ಮನೆ ಅಡುಗೆ ಇಷ್ಟ. ಬೇಯಿಸಿದ ತರಕಾರಿ, ನಾರುಯುಕ್ತ ಆಹಾರ, ಸೊಪ್ಪು, ಕಷಾಯ, ಸೂಪ್, ಚಪಾತಿ ಇಷ್ಟ. ರಾಗಿ ಮುದ್ದೆ ಆಗಾಗ ತಿನ್ನುತ್ತಾರೆ. ಎಲ್ಲವೂ ಫ್ರೆಶ್ ಆಗಿರಬೇಕು.

ಬೆಳಗ್ಗೆ ಮಾತ್ರ ತರಕಾರಿ ಜ್ಯೂಸ್ ಕುಡಿಯುವುದನ್ನು ಮರೆಯುವುದಿಲ್ಲ. ಅವರ ಜೊತೆ ಬಿರುಸಾಗಿ ನಡಿಗೆ ಮಾಡಲು ನಮ್ಮಿಂದ್ದಂತೂ ಸಾಧ್ಯವಿಲ್ಲ. ವಾಕಿಂಗ್ ನಂತರ ದಿನಪತ್ರಿಕೆ ಕಡ್ಡಾಯವಾಗಿ ಓದುತ್ತಾರೆ.

ನಮ್ಮಪ್ಪನ ಪೂಜೆ ಪುನಸ್ಕಾರಕ್ಕೆ ನಾವು ಎಂದೂ ಅಡ್ಡಿ ಬಂದಿಲ್ಲ. ಜೈಲಿಗೆ ಹೊರಟ ಸಮಯದಲ್ಲೂ ಬೆಳ್ಳಿ ಪೆಟ್ಟಿಗೆಯಲ್ಲಿ ಶಿವಲಿಂಗ ಹಾಗೂ ಪೂಜಾ ಸಾಮಾಗ್ರಿಯನ್ನು ಕೊಂಡೊಯ್ದಿದ್ದರು.

ಆದರೆ, 'ನಕಲಿ' ಜ್ಯೋತಿಷಿಗಳ ಹಿಂದೆ ಬೀಳುವುದನ್ನು ಮಾತ್ರ ನಮ್ಮ ಫ್ಯಾಮಿಲಿ ತುಂಬಾ ಸಲ ವಿರೋಧಿಸಿದ್ದೇವೆ. ಅಫ್ ಕೋರ್ಸ್ ಅದರಿಂದ ಏನು ಉಪಯೋಗವಾಗಿಲ್ಲ.

ಒಟ್ಟಿನಲ್ಲಿ ಅಪ್ಪನಿಗೆ ಜಾಮೀನು ಸಿಕ್ಕು ಮನೆಗೆ ಬಂದರೆ ಸಾಕು ಎಂದು ಯಡಿಯೂರಪ್ಪ ಅವರ ಮಗಳು ಉಮಾ ಹಾರೈಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+