ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದ ಬಿವೈ ಅರುಣಾ ದೇವಿ

BY Aruna Devi on BS Yeddyurappa
ಬೆಂಗಳೂರು, ಅ.18: ನಮ್ಮ ತಂದೆ ಅನುಭವಿಸುತ್ತಿರುವ ಅಸಹಾಯಕತೆ, ಮಾನಸಿಕ ಕ್ಷೋಭೆಯನ್ನು ನಾವು( ಐವರು ಮಕ್ಕಳು) ಭರಿಸಲು ಸಾಧ್ಯವಿಲ್ಲ. ಆಸ್ಪತ್ರೆಯಲ್ಲಿರುವ ಅಪ್ಪನನ್ನು ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ.

ಜನರ ದೊಂಬಿ ನಡುವೆ ಹತ್ತಿರ ಕೂತು ನಾಲ್ಕು ಸಾಂತ್ವನದ ಮಾತುಗಳನ್ನು ಆಡಲು ಆಗುತ್ತಿಲ್ಲ ಎಂದು ನಮಗೆಲ್ಲರಿಗೂ ಬೇಸರವಿದೆ.

ಆದರೆ, ಯಡಿಯೂರಪ್ಪ ಅವರು ಜನ ನಾಯಕ, ಅವರನ್ನು ಕಾಣಲು ಬರುವ ಜನತೆ ಮೊದಲ ಅವಕಾಶ ನೀಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರಿ ಬಿವೈ ಅರುಣಾ ದೇವಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮ್ಮ ತಂದೆ ಆಶಾವಾದಿ. ಅಯ್ಯೋ ಹೀಗೆಲ್ಲ ಆಯ್ತಲ್ಲ ಎಂದು ಮೂಲೆಯಲ್ಲಿ ಕೂತು ಅಳುವ ವ್ಯಕ್ತಿಯಲ್ಲ. ಕಾನೂನು ಸಮರದಲ್ಲಿ ನಮಗೆ ಜಯ ಸಿಗುತ್ತದೆ. ನಿರಪರಾಧಿಯಾಗಿ ಯಡಿಯೂರಪ್ಪ ಅವರು ಮತ್ತೆ ಜನರ ಮುಂದೆ ನಿಲ್ಲಲಿದ್ದಾರೆ ಎಂದು ಅರುಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಜನ ಶಿಕ್ಷನ ಸಂಸ್ಥಾನದ ನಿರ್ದೇಶಕಿಯಾಗಿ ಸಮಾಜ ಸೇವಕಿಯಾಗಿ ಅರುಣಾ ಜನಪ್ರಿಯತೆ ಗಳಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ.

ಯಡಿಯೂರಪ್ಪ ಅವರಿಗೆ ಟೈಂ ಟೈಮ್ ಗೆ ಊಟ ತಿಂಡಿ ಮಾತ್ರೆ ಕೊಟ್ಟು ತಾಯಿಯಂತೆ ಅಪ್ಪನನ್ನು ನೋಡಿಕೊಳ್ಳುತ್ತಿರುವುದು ನನ್ನ ತಂಗಿ ಉಮಾ ಎಂದು ಅರುಣಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಯಡಿಯೂರಪ್ಪ ಅವರ ಆಹಾರ ವಿಹಾರದ ಬಗ್ಗೆ ಉಮಾ ಏನು ಹೇಳ್ತಾರೆ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+