ಖಾಸಗಿ ದೂರಿನ ಮೇಲೆ ಮಾ.ಮು.ಯಡಿಯೂರಪ್ಪ ಜೈಲುಪಾಲು: ದೇಶದಲ್ಲೇ ಮೊದಲು!
ಬೆಂಗಳೂರು,
ಅ.18: 'ಆಪರೇಷನ್ ಕಮಲ'ದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಅದು ಮಾಡದೆ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕಿತ್ತು. ಸರ್ಕಾರ ಉಳಿಸುವುದು ನನಗೊಬ್ಬನಿಗೆ ಮಾತ್ರ ಬೇಕಿತ್ತೇ? ಬೇರೆ ಯಾರಿಗೂ ಬೇಕಿರಲಿಲ್ಲವೇ?' ಎಂದು ಮಾ.ಮು. ಯಡಿಯೂರಪ್ಪ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. id="toptextpromo">ಸರ್ಕಾರ
ಉಳಿಸುವ ಕಾರ್ಯತಂತ್ರದಲ್ಲಿ ರಾಷ್ಟ್ರೀಯ ನಾಯಕರು ಕೂಡ ಭಾಗವಹಿಸಿದ್ದರು. ಅವರು ಕೂಡ ಈ ಎಲ್ಲ ಘಟನಾವಳಿಗಳಿಗೆ ಕಾರಣರಲ್ಲವೆ ಎಂದೂ ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'>'ಖಾಸಗಿ
ದೂರಿನ ಮೇಲೆ ನ್ಯಾಯಾಲಯ ನನ್ನನ್ನು ಜೈಲಿಗೆ ಹಾಕಿದೆ. ದೇಶದಲ್ಲೇ ಮೊದಲ ಪ್ರಕರಣ ಇದು. ಇದರ ನಂತರ ಬಂಧನ ವಾರೆಂಟ್ ಜಾರಿಯಾಗುವ ಮುನ್ನವೇ ಪೋಲೀಸರು ನನ್ನನ್ನು ಬಂಧಿಸಲು ನನ್ನ ಮನೆಗೆ ಹೋದರು. ಇಷ್ಟು ವರ್ಷ ರಾಜ್ಯಕ್ಕಾಗಿ ದುಡಿದ ನನಗೆ ಇದೆಂಥ ಘೋರ ಶಿಕ್ಷೆ' ಎಂದು ಯಡಿಯೂರಪ್ಪ ಪ್ರಲಾಪಿಸಿದರು ಎನ್ನಲಾಗಿದೆ.











Click it and Unblock the Notifications