ಅಕಟಕಟಾ ನನಗೇಕೆ ಇಂಥಾ ಘೋರ ಶಿಕ್ಷೆ?: ಯಡಿಯೂರಪ್ಪ ಅಮಾಯಕ ಪ್ರಶ್ನೆ
ಬೆಂಗಳೂರು,
ಅ.18: 'ನನ್ನ ಬಂಧನದಿಂದ ಪಕ್ಷದಲ್ಲಿ ಕೆಲವರಿಗೆ ಖುಷಿಯಾಗಿದೆ. ಅವರೆಲ್ಲ ಹಬ್ಬ ಆಚರಿಸುತ್ತಿದ್ದಾರೆ. ಇದು ನನಗೆ ತುಂಬ ಬೇಸರ ತಂದಿದೆ'- ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೀಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. id="toptextpromo">ಜಯದೇವ
ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮನ್ನು ನೋಡಲು ಹೋದ ಪಕ್ಷದ ಮುಖಂಡರ ಜತೆ ಈ ರೀತಿ ದುಃಖ ತೋಡಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಪಕ್ಷದಲ್ಲಿನ
ನನ್ನ ವಿರೋಧಿಗಳು ಪಕ್ಷಕ್ಕಾಗಿ ಎಂದೂ ದುಡಿಯಲಿಲ್ಲ. ಆದರೆ, ಅಧಿಕಾರ ಮಾತ್ರ ಅನುಭವಿಸಿದರು. 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ರಾಜ್ಯ ಸುತ್ತಿದ್ದೇನೆ. ಇದ್ಯಾವುದನ್ನೂ ಲೆಕ್ಕಿಸದ ಕೆಲವರು ನನ್ನ ಬಂಧನದ ಸುದ್ದಿ ಕೇಳಿದ ತಕ್ಷಣ ಸಂಭ್ರಮಿಸಿದ್ದಾರೆ. ನಾನೇನು ಅಂತಹ ತಪ್ಪು ಮಾಡಿದ್ದೇನೆ' ಎಂದು ನೋವು ತೋಡಿಕೊಂಡರು ಎನ್ನಲಾಗಿದೆ.











Click it and Unblock the Notifications