ಯಡಿಯೂರಪ್ಪ ಜೈಲುವಾಸ: 'ಅನಂತ' ಮೌನವೇಕೆ!?
ಬೆಂಗಳೂರು,
ಅ.18: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೈಲುಪಾಲಾಗಿದ್ದೇ ಬಂತು ಒಬ್ಬೊಬ್ಬರೂ ಒಂದೊಂದು ಥರಾ ಮಾತನಾಡಿಕೊಳ್ಳುತ್ತಿದ್ದಾರೆ!. ಆದರೆ ಕೆಲವರು ಏನೂ ಮಾತನಾಡದೆ ತಮ್ಮ ಮೌನವನ್ನೇ ಪ್ರತಿಕ್ರಿಯೆಯನ್ನಾಗಿಸಿದ್ದಾರೆ. id="toptextpromo">ಇದೊಂದು
ರೀತಿ ನಿರೀಕ್ಷಿತವೇ ಆಗಿದ್ದರೂ ತೀರಾ ಈ ಪಾಟಿ ಮೌನವಹಿಸಿರುವುದು ಒಂದಷ್ಟು ಆಶ್ಚರ್ಯವನ್ನೇ ತಂದಿದೆ. ಇನ್ನು, ಖುದ್ದು ಯಡಿಯೂರಪ್ಪನವರಿಗೆ ಒಳಗೊಳಗೆ ... ಖೇದವಾಗಿದೆ. ಇಷ್ಟೆಲ್ಲ ಯಾರ ಬಗ್ಗೆ ಹೇಳುತ್ತಿರುವುದು ಎಂಬುದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಒಂದು ಕಾಲದ ಜೀವದ ಗೆಳೆಯ, ಹಕ್ಕ ಬುಕ್ಕ ಎಂದೇ ಗುರುತಿಸಲ್ಪಡುತ್ತಿದ್ದ ಜೋಡಿ ಜೀವಗಳು ಅವು. id='are-slot-1' class='oiad oi-axt oiadv'> id='top-searched-articles'>ಆದರೆ
ಈಗ ಮೊದಲಿನಂತಿಲ್ಲ. ಪರಸ್ಪರ ಒಳಗೊಳಗೇ ಕತ್ತಿ ಮಸೆಯುವುದು ಇಡೀ ಜಗತ್ತಿಗೆ ತಿಳಿದ ವಿಷಯ. ಕಡುವೈರಿಯೇ ಜೈಲು ಸೇರಿದ್ದರೂ ಎಂಥವನಿಗೇ ಆಗಲಿ ಒಂದು ಕ್ಷಣ ಪಿಚ್ಚೆನಿಸುತ್ತದೆ. ಆದರೆ ನಮ್ಮ ಎಚ್. ಎನ್. ಅನಂತಕುಮಾರ್ ಗೆ ಏನಾಗಿದೆ? ಅವರೇಕೆ ಯಡಿಯೂರಪ್ಪ ಬಂಧನದ ಬಗ್ಗೆ ಕಾಷ್ಠ ಮೌನವಹಿಸಿದ್ದಾರೆ!? ಇದಕ್ಕೆ ಲಾಲ ಕೃಷ್ಣ ಅಡ್ವಾಣಿ ಮಹಾಪ್ರಭುಗಳೇ ಉತ್ತರಿಸಬೇಕು.











Click it and Unblock the Notifications