ಉಜ್ಜಯಿನಿ ಮರುಳಸಿದ್ಧ ಶಿವಾಚಾರ್ಯರು ಲಿಂಗೈಕ್ಯ
ಬಳ್ಳಾರಿ,
ಅ. 18 : ವೀರಶೈವ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ 111ನೇ ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯರು ಸೋಮವಾರ ರಾತ್ರಿ 8.40ರ ಸುಮಾರಿಗೆ ಪೀಠದಲ್ಲಿಯೇ ಲಿಂಗೈಕ್ಯರಾಗಿದ್ದಾರೆ. ಮಠದಲ್ಲಿ ದೀಪಾವಳಿಗೂ ಮೊದಲೇ ಕತ್ತಲು ಕವಿದಂತಾಗಿದೆ. id="toptextpromo">ಲಿವರ್
ಟ್ರಾನ್ಸ್‌ಪ್ಲಂಟೇಶನ್ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಉಜ್ಜಯಿನಿ ಮರುಳಸಿದ್ಧ ರಾಜದೇಶೀಕೇಂದ್ರ ಶಿವಾಚಾರ್ಯ ಜಗದ್ಗುರುಗಳು (48) ಚೇತರಿಸಿಕೊಳ್ಳದೇ ಇದ್ದಾಗ ಅವರ ಸ್ವ ಇಚ್ಚೆಯಂತೆ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಅವರನ್ನು ಸೋಮವಾರ ರಾತ್ರಿ 8.30ರ ಸುಮಾರಿಗೆ ಕೃತಕ ಉಸಿರಾಟದ ವೆಂಟಿಲೇಟರ್‌ಗಳ ಮೂಲಕವೇ ಕರೆ ತರಲಾಯಿತು. id='are-slot-1' class='oiad oi-axt oiadv'> id='top-searched-articles'>ಪೀಠಕ್ಕೆ
ಶ್ರೀಗಳು ಆಗಮಿಸುತ್ತಿದ್ದಂತೆಯೇ ಸಭೆ ಸೇರಿದ್ದ ಭಕ್ತರು ಶ್ರೀಗಳಿಗೆ ಜೈಕಾರ ಹಾಕುತ್ತಲೇ ವೇದಮಂತ್ರಗಳ ಘೋಷಣೆಗೆ ಮುಂದಾದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿವಾಚಾರ್ಯರು, ಶಾಸ್ತ್ರಿಗಳು ಮತ್ತು ಭಕ್ತರ ಸಮ್ಮುಖದಲ್ಲಿಯೇ ಶ್ರೀಗಳ ಕೃತಕ ಉಸಿರಾಟ ವ್ಯವಸ್ಥೆಯನ್ನು ತೆಗೆಯಲಾಯಿತು. ವೆಂಟಿಲೇಟರ್‌ಗಳನ್ನು ತೆಗೆದ ನಂತರ 10 ನಿಮಿಷಗಳ ಕಾಲ ಶ್ರೀಗಳು ಉಸಿರಾಡಿದರು ಎಂದು ಆಪ್ತ ಮೂಲಗಳು ತಿಳಿಸಿವೆ.











Click it and Unblock the Notifications